Breaking News
Home / ಅಂತರಾಷ್ಟ್ರೀಯ / ಜಿ.ಪಂ. ಸದಸ್ಯ ಯೋಗೀಶ್​ ಗೌಡ ಹತ್ಯೆ ಪ್ರಕರಣದಲ್ಲಿ ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಕಸ್ಟಡಿ ಅವಧಿ

ಜಿ.ಪಂ. ಸದಸ್ಯ ಯೋಗೀಶ್​ ಗೌಡ ಹತ್ಯೆ ಪ್ರಕರಣದಲ್ಲಿ ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಕಸ್ಟಡಿ ಅವಧಿ

Spread the love

ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್​ ಗೌಡ ಹತ್ಯೆ ಪ್ರಕರಣದಲ್ಲಿ ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ಕೋರ್ಟ್‌ಗೆ ಕರೆದೊಯ್ದರು. ಮಾಜಿ ಸಚಿವರನ್ನು ಹುಬ್ಬಳ್ಳಿಯ ಸಿಎಆರ್ ಮೈದಾನದಿಂದ ಕರೆದೊಯ್ದು ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಿದರು.

             ಆದರೆ, ಇಂದು ನ್ಯಾಯಾಲಯದಲ್ಲಿ ವಿನಯ್​ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಅಸಾಧ್ಯವೆಂಬ ಮಾಹಿತಿ ಸಿಕ್ಕಿದೆ.

 

ಮಾಜಿ ಸಚಿವರ ಪರ ಜಾಮೀನು ಅರ್ಜಿ ಸಲ್ಲಿಸಿಲಾಗಿದ್ದರೂ ಸಿಬಿಐ ತನ್ನ ಆಕ್ಷೆಪಣೆ ಇನ್ನು ಸಲ್ಲಿಸಲ್ಲ. ಹಾಗಾಗಿ, ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯುವುದಿಲ್ಲ ಎಂದು ಹೇಳಲಾಗಿದೆ.

ಕೋರ್ಟ್‌ಗೆ ಖಾಕಿ ಸರ್ಪಗಾವಲು
ಇತ್ತ, ವಿನಯ್​ ಕುಲಕರ್ಣಿಯನ್ನು ಕೋರ್ಟ್​ಗೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಭದ್ರತೆಗೆಂದು ನ್ಯಾಯಾಲಯದ ನಾಲ್ಕು ಕಡೆಗಳಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಜೊತೆಗೆ, ಮಾಜಿ ಸಚಿವರನ್ನು ಕರೆತಂದ ಸಿಬಿಐ ವಾಹನವನ್ನು ಯಾರೂ ಹಿಂಬಾಲಿಸದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರು. ಧಾರವಾಡ ಎಸ್‌.ಪಿಗೆ ಅನಾರೋಗ್ಯವಿರುವ ಹಿನ್ನೆಲೆ ದಾವಣಗೆರೆ ಐಜಿಪಿ ಎಸ್.ರವಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.

ಅಷ್ಟೇ ಅಲ್ಲದೆ, ಧಾರವಾಡದ ನ್ಯಾಯಾಲಯದ ಬಳಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಕೋರ್ಟ್ ಬಳಿ ಭದ್ರತೆ ನೀಡಲಾಗಿದ್ದು 3 ಡಿವೈಎಸ್‌ಪಿ, 10 ಇನ್ಸ್‌ಪೆಕ್ಟರ್‌ಗಳು, 15 PSI ಸೇರಿದಂತೆ 130ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜೊತೆಗೆ, 3 ಕೆಎಸ್‌ಆರ್‌ಪಿ ಹಾಗೂ 5 ಸಿಎಆರ್ ತುಕಡಿಗಳನ್ನು ನ್ಯಾಯಾಲಯದ ಬಳಿ ನಿಯೋಜನೆ ಮಾಡಲಾಗಿತ್ತು. ಕೋರ್ಟ್ ಹೊರಗಡೆ ವಾಹನಗಳ ನಿಲುಗಡೆಗೆ ಸಹ ನಿರ್ಬಂಧ ಹೇರಲಾಗಿದೆ.

ಕೋರ್ಟ್‌ಗೆ ಆಗಮಿಸಿದ ಯೋಗೀಶ್ ಸಹೋದರಿ
ಇತ್ತ, ವಿನಯ್ ಕುಲಕರ್ಣಿ ಕೋರ್ಟ್‌ಗೆ ಹಾಜರಾದ ಹಿನ್ನೆಲೆಯಲ್ಲಿ ಅವರೊಟ್ಟಿಗೆ ಸಿಬಿಐ ಅಧಿಕಾರಿಗಳು ಸಹ ಆಗಮಿಸಿದರು. ಕೆಲವು ದಾಖಲೆಗಳ ಸಹಿತ ಸಿಬಿಐ ಅಧಿಕಾರಿಗಳು ಕೋರ್ಟ್​ಗೆ ಆಗಮಿಸಿದರು. ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ಸಿಬಿಐ ತಂಡ ಆಗಮಿಸಿತು. ಇದಲ್ಲದೆ, ಧಾರವಾಡ ಕೋರ್ಟ್‌ಗೆ ಯೋಗೀಶ್ ಸಹೋದರಿ ಸಹ ಆಗಮಿಸಿದರು. ಮೃತ ಯೋಗೀಶ್‌ ಗೌಡ ಸಹೋದರಿ ಅಕ್ಕಮಹಾದೇವಿ ಸಹ ಕೋರ್ಟ್​ ವಿಚಾರಣೆ ವೀಕ್ಷಿಸಲು ಆಗಮಿಸಿದರು. ಅಕ್ಕಮಹಾದೇವಿಯೊಂದಿಗೆ ಮತ್ತೊಬ್ಬ ಸಹೋದರಿ ವಿಜಯಲಕ್ಷ್ಮಿ ಕೂಡ ಬಂದಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ