Breaking News

ಭಾರತದಲ್ಲಿ ಕೊರೊನಾ ಏರಿಳಿತದ ಆಟ : 24 ಗಂಟೆಯಲ್ಲಿ 45,231 ಪಾಸಿಟಿವ್, 496 ಡೆತ್

Spread the love

ನವದೆಹಲಿ/ಮುಂಬೈ,ನ.2-ದೇಶದಲ್ಲಿ ಕಳೆದ ಏಳು ವಾರಗಳಿಂದ ಹೊಸ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಇಳಿಮುಖದ ವೇಗ ನಿಧಾನವಾಗುತ್ತಿದೆ. ಚಳಿಗಾಲ ಮತ್ತು ಹಬ್ಬದ ಋತುವಿನಲ್ಲಿ ಡೆಡ್ಲಿ ಕೊರೊನಾ ವೈರಸ್ ಏರಿಳಿತದ ಆಟ ಮುಂದುವರಿದಿದೆ. ದೇಶಾದ್ಯಂತ ಮಾರಕ ಕೊರೊನಾ ವೈರಸ್‍ನ ಹಾವಳಿ ಇಳಿಮುಖವಾಗುವ ಮುನ್ಸೂಚನೆ ಮತ್ತೆ ಗೋಚರಿಸ ತೊಡಗಿದ್ದು, ದಿನನಿತ್ಯದ ಸೋಂಕು ಪ್ರಕರಣಗಳಲ್ಲಿ ಇಳಿಕೆಯಾದರೂ ಸಾವು ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದೆ.ಕಳೆದ ಆರು ದಿನಗಳಿಂದಲೂ 50,000 ಸನಿಹದಲ್ಲೇ ಪಾಸಿಟಿವ್ ಪ್ರಕರಣಗಳ ದಾಖಲೆ ಮುಂದುವರಿದಿದೆ. ಸತತ ನಾಲ್ಕನೇ ದಿನ ಸಕ್ರಿಯ ಸೋಂಕು ಪ್ರಕರಣಗಳು 6 ಲಕ್ಷಕ್ಕಿಂತ ಕಡಿಮೆಯಾಗಿದ್ದು, 75.44 ಲಕ್ಷ ರೋಗಿಗಳು ಕೊರೊನಾ ಸಾವಿನ ದವಡೆಯಿಂದ ಪಾರಾಗಿದ್ದಾರೆ. ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳು 82.30 ಲಕ್ಷ ಮತ್ತು ಸಾವಿನ ಸಂಖ್ಯೆ 1.22 ಲಕ್ಷ ಸನಿಹವಿದೆ.

ನ್ನೆ 45,231 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಮೊನ್ನೆ 46,963ರಷ್ಟಿತ್ತು. ಸತತ 15ನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ. ಅಲ್ಲದೇ ಸತತ 17ನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ. 85 ದಿನಗಳ ತರುವಾಯ ಇದು 6 ಲಕ್ಷಕ್ಕಿಂತ ಕಡಿಮೆ ಇಳಿದಿದೆ. ಸತತ ನಾಲ್ಕು ದಿನಗಳಿಂದ ಆರು ಲಕ್ಷಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮುಂದುವರಿದಿರುವುದು ನಿರಾಳತೆ ಮೂಡಿಸಿದೆ. ಕಳೆದ ಅಕ್ಟೋಬರ್‍ನಲ್ಲಿ ಎಂಟನೇ ಬಾರಿ 50,000ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಇಳಿಕೆ ಕಂಡುಬಂದಿದ್ದು, 24 ತಾಸುಗಳ ಅವಧಿಯಲ್ಲಿ 496 ಮಂದಿ ಸಾವಿಗೀಡಾಗಿದ್ದಾರೆ. ಮೊನ್ನೆ 471 ರೋಗಿಗಳು ಬಲಿಯಾಗಿದ್ದರು. ಕಳೆದ ತಿಂಗಳು ಸಾವಿನ ಸಂಖ್ಯೆಯಲ್ಲಿ ಶೇ.30ರಷ್ಟು ಇಳಿಕೆ ಕಂಡುಬಂದಿರುವುದು ಸಮಾಧಾನಕರ ಸಂಗತಿ. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 82.30 ಲಕ್ಷ ದಾಟುತ್ತಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ