Breaking News

ಎಂಜಿನಿಯರ್ ಬನ್ ಗಯಾ ಚಾಯ್‍ವಾಲಾ – ಬದುಕಿಗೆ ದಾರಿ ತೋರಿಸಿದ ಟೀ ಬ್ಯುಸಿನೆಸ್

Spread the love

ಬಾಗಲಕೋಟೆ: ಸದ್ಯ ದೇಶದ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು ನಿರುದ್ಯೋಗ. ಪ್ರಧಾನಿ ಮೋದಿಯವರೂ ನಿರುದ್ಯೋಗ ಸಮಸ್ಯೆಗೆ ಯುವಕರಿಗೆ ಪಕೋಡ ಮಾರಿ ಅಂತ ಕರೆ ನೀಡಿದರು. ಆದರೆ ಉತ್ತರ ಕರ್ನಾಟಕದ ಯುವಕನೊಬ್ಬ ತನ್ನ ಓದಿಗೆ ತಕ್ಕ ಕೆಲಸವೇ ಬೇಕೆಂದು ಸಮಯ ವ್ಯರ್ಥ ಮಾಡದೇ ಭಿನ್ನವಾಗಿ ಯೋಚಿಸಿ ಯಶಸ್ವಿಯಾಗಿದ್ದಾನೆ.

ಎಂಜಿನಿಯರ್ ಬನ್ ಗಯಾ ಚಾಯ್ ವಾಲಾ. ಅರೇ ಇದೇನಿದು ಚಾಯ್ ಅಂಗಡಿ ಹೆಸರು ಡಿಫರೆಂಟ್ ಆಗಿದೆ. ಹೌದು ಅಲ್ಲೇ ಇರೋದು ಟ್ವಿಸ್ಟ್. ಅಮೀರ್ ಸೋಹೈಲ್ ಎಂಬ ಯುವಕ ಎಂಜಿನಿಯರಿಂಗ್ ಪದವೀಧರ. ಡಿಪ್ಲೋಮಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆದರೆ ಈಗ ಮಾಡ್ತಾ ಇರೋದು ಟೀ ಬ್ಯುಸಿನೆಸ್.

ಸೋಹೈಲ್ ಕಳೆದ ವರ್ಷ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಆತನಿಗೆ ಅಲ್ಲಿ ಸಿಗ್ತಾ ಇದ್ದ ಸಂಬಳ ಕೇವಲ 15 ಸಾವಿರ ಮಾತ್ರ. ಅಷ್ಟೆಲ್ಲಾ ಓದಿದ್ರೂ ಕೇವಲ 15 ಸಾವಿರಕ್ಕೆ ಕೆಲಸ ಮಾಡ್ತಿದ್ದ ಸೋಹೈಲ್‍ಗೆ ಕಡಿಮೆ ಸಂಬಳದಲ್ಲಿ ತನ್ನ ಕುಟುಂಬ ಪೋಷಣೆ ಮಾಡೋದು ತುಂಬಾನೆ ಕಷ್ಟ ಆಗ್ತಿತ್ತಂತೆ. ಹೀಗಾಗಿ ಬೆಂಗಳೂರು ಬಿಟ್ಟು ಬಂದು ಬಾಗಲಕೋಟೆಯಲ್ಲಿ ಶುರು ಮಾಡಿದ್ದು ಚಾಯ್ ವ್ಯಾಪಾರ. ಸೋಹೈಲ್ ತಮ್ಮ ಟೀ ಶಾಪ್‍ಗೆ ‘ಎಂಜಿನಿಯರ್ ಬನ್ ಗಯಾ ಟೀ ವಾಲಾ’ ಅಂತ ಹೆಸರಿಟ್ಟರು. ಟೀ ಕಪ್‍ಗಳ ಮೇಲೆಯೂ ಎಂಜಿನಿಯರ್ ಟೀ ಅಂತ ಪ್ರಿಂಟ್ ಮಾಡಿಸಿದ್ರು. ಗುಡ್ ಟೇಸ್ಟ್ ಕೂಡ ಕೊಟ್ಟರು. ಪರಿಣಾಮ ಕೈತುಂಬಾ ದುಡ್ಡು ನೋಡ್ತಿದ್ದಾರೆ. ಬೆಂಗಳೂರಲ್ಲಿ ದುಡಿಯುತ್ತಿದ್ದ ಸಂಬಳಕ್ಕಿಂತ ಮೂರು ಪಟ್ಟು ಅಂದ್ರೆ ತಿಂಗಳಿಗೆ ಸರಾಸರಿ 50 ಸಾವಿರ ರೂಪಾಯಿ ತಿಂಗಳಿಗೆ ಆದಾಯ ಗಳಿಸ್ತಿದ್ದಾರೆ.

ಸೋಹೈಲ್ ಅಂಗಡಿಯಲ್ಲಿ ಸಿಗೋ ಕೆನೆ ಹಾಲಿನ ಟೀ ಬಾಗಲಕೋಟೆಯಲ್ಲಿಯೇ ಸ್ಪೆಶಲ್ ಅನ್ನೋ ಹೆಗ್ಗಳಿಕೆ ಪಡೆದಿದೆ. ಚಾಯ್ ಮಾರಿದವರು ಪ್ರಧಾನಿನೇ ಆಗಿದ್ದಾರೆ. ಇನ್ನು ನಾವೇಕೆ ಹಿಂಜರಿಕೆ ಪಡಬೇಕು. ಖಾಲಿ ಕೂರದೇ ವ್ಯಾಪಾರ ಶುರು ಮಾಡಿದ್ರೆ ಬೇರೆಯವ್ರಿಗೂ ಕೆಲಸ ಕೊಡಬಹುದು ಎಂದು ಸೋಹೈಲ್ ಹೇಳುತ್ತಾರೆ.

ಎಷ್ಟೋ ಯುವಕರು ತಮಗೆ ಕೆಲಸವಿಲ್ಲವೆಂದು ಹತಾಶರಾಗಿ ಹಣ ಗಳಿಸಲಿಕ್ಕೆ ವಾಮ ಮಾರ್ಗ ಅನುಸರಿಸುವ ಈ ಕಾಲದಲ್ಲಿ ಸೋಹೈಲ್ ಅಂತವರಿಗೆಲ್ಲ ಮಾದರಿಯಾಗಿದ್ದಾರೆ. ಮನಸ್ಸಿದ್ದರೆ ಮಾರ್ಗವೆಂಬುದನ್ನು ಸಾಧಿಸಿ ತೋರಿಸಿದ್ದಾರೆ.


Spread the love

About Laxminews 24x7

Check Also

ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ

Spread the love ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ ಬಾಗಲಕೋಟೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ