Breaking News

ಯಾವುದೇ ಸಂಘಟನೆ ಒಂದು ಜಾತಿಗೆ ಸೀಮಿತವಾಗದೇ ಮಾನವೀಯತೆ ಪರವಾಗಿ ಕೆಲಸ ಮಾಡಬೇಕು: ಸತೀಶ ಜಾರಕಿಹೊಳಿ

Spread the love

ಬೈಲಹೊಂಗಲ: ಯಾವುದೇ ಸಂಘಟನೆ ಒಂದು ಜಾತಿಗೆ ಸೀಮಿತವಾಗದೇ ಮಾನವೀಯತೆ ಪರವಾಗಿ ಕೆಲಸ ಮಾಡಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮುರ್ಕಿಭಾಂವಿ ಗ್ರಾಮದಲ್ಲಿ ಸೋಮವಾರ ದಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಸಂಘಟನೆಗೆ ಚಾಲನೆ ನೀಡಿ  ಉದ್ಘಾಟಿಸಲಾಯಿತು. ನೀಡಿ ಬಳಿಕ ಮಾತನಾಡಿದ ಅವರು, ಸಂಘ ಕಟ್ಟುವುದು ಸುಲಭ, ಆದ್ರೆ ಅವುಗಳನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಕಷ್ಟಕರವಾಗಿದೆ. ಇತ್ತೀಚಿಗೆ ಸಾಕಷ್ಟು ಸಂಘಟನೆಗಳು ಹುಟ್ಟಿಕೊಂಡಿವೆ. ನಿರ್ದಿಷ್ಟ ಗುರಿ ಇಲ್ಲ ನಶಿಸಿ ಹೋಗುತ್ತಿವೆ ಎಂದರು.

ನಮ್ಮಲ್ಲಿ ಒಗ್ಗಟ್ಟಿದ್ದರೆ ಎಂತಹ ಸಮಸ್ಯೆ ಬಗೆಹರಿಸಲು ಸಂಘ- ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಸಂಘಟನೆಗಳು ದೂರ ದೃಷ್ಠಿ, ನಿರ್ಧಿಷ್ಟ ಗುರಿಯನ್ನು ಹೊಂದಿದ್ದರೆ ತುಂಬ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಹಲವು ಸಂಘ-ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸಿವೆ.  ನಮ್ಮ ಒಡೆತನದ ಸತೀಶ ಜಾರಕಿಹೊಳಿ ಪೌಂಡೇಶನ ಕೂಡ ಕೋವಿಡ್ ಸಂದರ್ಭದಲ್ಲಿ ಉಚಿತ ಆಕ್ಸಿಜನ್ ಸೇರಿದಂತೆ ಅಗತ್ಯವಸ್ತುಗಳು ಪೂರೈಸುವ ಮೂಲಕ ಹಲವರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದೆ ಎಂದು ಸ್ಮರಿಸಿದರು.

ಶಾಸಕ ಮಹಾಂತೇಶ ಕೌಜಲಗಿ,ಮಹಾಂತೇಶ ದೊಡ್ಡಗೌಡರ, ಹಬೀಬ,  ಶಿಲ್ಲೇದಾರ್,   ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ, ಬಾಳೇಶ್ ದಾಸನಟ್ಟಿ, ಬಾಳೇಶ್ ಪೂಜಾರಿ ಸೇರಿದಂತೆ ಮುಂತಾದವರು ಇದ್ದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ