ವಿಜಯಪುರ: ಕಾಲುವೆಯಲ್ಲಿ ಮುಳುಗಿ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಿಡಗುಂದಿ ಹೊರವಲಯದ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ಅಂಜನಾ ಕೊಂಚಿಕೊರವರ(28) ಮತ್ತು ನಾಗೇಶ(8) ನೀರುಪಾಲಾದ ದುರ್ದೈವಿಗಳು.
ಪುತ್ರನ ಜೊತೆ ಅಂಜನಾ ಬಟ್ಟೆ ತೊಳೆಯಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕಾಲುವೆಯಲ್ಲಿ ಈಜಾಡುವ ವೇಳೆ ನಾಗೇಶ ಮುಳುಗಲು ಆರಂಭಿಸಿದ್ದನಂತೆ. ಈ ನಡುವೆ, ಪುತ್ರನ ರಕ್ಷಣೆಗಾಗಿ ಧಾವಿಸಿದ ತಾಯಿಯೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
 Laxmi News 24×7
Laxmi News 24×7
				 
		 
						
					 
						
					 
						
					