ಬಾಗಲಕೋಟೆ : ನಾವಂತೂ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ. ಒಂದು ವೇಳೆ ಅವರ ತಿಕ್ಕಾಟದಿಂದಲೇ ಸರ್ಕಾರ ಬಿದ್ದು ಹೋದರೆ ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶಾಸಕ ಯತ್ನಾಳ ಹೇಳಿಕೆಗೆ ಬಾದಾಮಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಹಳ ದಿನ ಯಡಿಯೂರಪ್ಪ ಸಿಎಂ ಆಗಿರಲ್ಲ ಎಂಬ ಮಾತು ಸದ್ಯ ಹೆಚ್ಚಾಗಿ ಕೇಳಿ ಬರುತ್ತಿದೆ. ಯಡಿಯೂರಪ್ಪನವರನ್ನು ತೆಗೆಯಬೇಕೆಂದು ಬಹಳ ದೊಡ್ಡ ಚರ್ಚೆ ನಡೆದಿದೆ.
ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವ ಚಚೆ೯ ನಡೆಯುತ್ತಿರುವುದು ನಿಜ. ಆದರೆ ಯಾವಾಗ ಇಳಿಸ್ತಾರೆ, ಯಾರು ಸಿಎಂ ಆಗ್ತಾರೆ ಅಂತ ನನಗೆ ಗೊತ್ತಿಲ್ಲ, ಚಚೆ೯ಯಂತೂ ನಡೀತಾ ಇದೆ ಎಂದರು.
ಇನ್ನು, ಉತ್ತರ ಕನಾ೯ಟಕದವರೇ ಸಿಎಂ ಆಗ್ತಾರೆ ಎನ್ನುವ ಯತ್ನಾಳ ಹೇಳಿಕೆಗೆ, ಅದು ಅವರ ಪಕ್ಷದ ವಿಚಾರ, ನಾನೇಕೆ ಮಾತನಾಡಲಿ, ಯಡಿಯೂರಪ್ಪ ಮಾತನಾಡಲಿ ಎಂದು ಹೇಳಿದರು.
ಸಿಎಂ ಯತ್ನಾಳ ಕ್ಷೇತ್ರದ ಅನುದಾನ ಕಡಿತದ ಬಗ್ಗೆ ಅಸಮಾಧಾನ ತೋರಿದ ವಿಚಾರವಾಗಿ, ನಾವು ಸತ್ಯ ಹೇಳ್ತಿದ್ವಿ, ಪಾಪ ಅವರಿಗೂ ಬಿಸಿ ಮುಟ್ಟಿದೆ. ಈಗ ಅವರು ಕೂಡ ಸತ್ಯ ಹೇಳೋಕೆ ಶುರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
Laxmi News 24×7