Breaking News

ಬಾಲಿವುಡ್ ನಟ ವಿವೇಕ್  ಓಬೇರಾಯ್ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ

Spread the love

ಮುಂಬೈ:  ಡ್ರಗ್ಸ್ ಪ್ರಕರಣ ಸಂಬಂಧ  ಬಾಲಿವುಡ್ ನಟ ವಿವೇಕ್  ಓಬೇರಾಯ್ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಸ್ಯಾಂಡಲ್ ವುಡೇ ಡ್ರಗ್ಸ್ ಪ್ರಕರಣದಲ್ಲಿ ಎ-6 ಆರೋಪಿಯಾಗಿರುವ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಆತನನ್ನು  ವಿಚಾರಣೆಗೆ ಒಳಪಡಿಸಲು  ಪೊಲೀಸರು ಹುಡುಕಾಟ ನಡೆಸಿದ್ದರೆ.  ಆದಿತ್ಯ ಆಳ್ವಾ, ನಟ ವಿವೇಕ ಅವರ ಸಂಬಂಧಿಯಾಗಿದ್ದು, ಅವರ  ಮನೆಯಲ್ಲಿ ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ ದಾಳಿ ನಡೆಸಿದ್ದಾರೆ.

ಇದೇ ಕಾರಣದಿಂದ ಬೆಂಗಳೂರಿನ ಸಿಸಿಬಿ ಪೊಲೀಸರು ಸರ್ಚ್ ವಾರೆಂಟ್ ನೊಂದಿಗೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರ ಮುಂಬೈನ ಜುಹು ಪ್ರದೇಶದಲ್ಲಿರುವಂತ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ನಟ ವಿವೇಕ್ ಓಬೆರಾಯ್ ನಿವಾಸದಲ್ಲಿ ಅಡಗಿ ಕುಳಿತಿದ್ದಾನಾ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವಾ ಎನ್ನುವ ಕುರಿತಂತೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ