Breaking News

ಅಕ್ಟೋಬರ್ ನಲ್ಲಿ ಜಲಪ್ರಳಯ ಬಂದಾಯ್ತು..! ನಿಜವಾಗ್ತಿವೆ ಕೋಡಿ ಶ್ರೀಗಳ ಭವಿಷ್ಯ..!

Spread the love

ಹಾಸನ : ರಾಜ್ಯದಲ್ಲಿ‌‌ ನಡೆಯುವ ಹಲವು ರಾಜಕೀಯ ಹಾಗೂ ಪ್ರಾಕೃತಿಕ ಸನ್ನಿವೇಶಗಳ‌‌ ಬಗ್ಗೆ ಭವಿಷ್ಯ‌ ನುಡಿಯುವ ಮೂಲಕ ಚಿರಪರಿಚಿತರಾಗಿರುವ ಕೋಡಿಮಠ ಶೀಗಳು ಎರಡು ತಿಂಗಳ ಹಿಂದಿನ ಭವಿಷ್ಯ ನಿಜವಾಗುತ್ತಿದ್ದು‌ ಆತಂಕ ಮೂಡಿಸಿದೆ.

ಹೌದು…ಜಿಲ್ಲೆಯ ಅರಸೀಕೆರೆ ತಾಲೋಕಿನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಆಗಸ್ಟ್ 14 ರಂದು ನುಡಿದ ಭವಿಷ್ಯದಲ್ಲಿ “ಆಗಸ್ಟ್ ತಿಂಗಳಲ್ಲಿ ವಿಪರೀತ ಜಲ ಪ್ರಳಯವಾಗಲಿದೆ ಎಂದು ಹೇಳಿದ್ದರು ನಂತರ ಅಕ್ಟೋಬರ್ ತಿಂಗಳಲ್ಲಿ ಜಲ ಪ್ರಳಯ, ವಾಯು ಆಘಾತ ಹಾಗೂ ಭೂ ಕುಸಿತಗಳು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು,

ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಗೋಚರಿಸಿರುವ ಹಿನ್ನೆಲೆಯಲ್ಲಿ ಈ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದೆ ಎಂದು ವಿವರಿಸಿದ್ದ ಅವರು ಮುಂದಿನ ದಿನದಲ್ಲಿ‌ ಇನ್ನಷ್ಟು ತೊಂದರೆ ಅನುಭವುಸಬೇಕಾಗುತ್ತದೆ ಎಂದು ಹೇಳಿದ್ದರು.

ಅದರಂತೆ ಅಕ್ಟೋಬರ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆಹಾವಳಿ ಮರುಕಳಿಸಿದೆ. ಅಲ್ಲದೆ‌ ರಾಜ್ಯದ ಹಲವು ಜಿಲ್ಲೆಯ ಪ್ರಮುಖ ಸ್ಥಳಗಳಾದ ಚಾಮುಂಡಿ ಬೆಟ್ಟ , ಶಿರಾಡಿ, ಚಾರ್ಮಾಡಿ ಘಾಟ್ ಸೇರಿದಂತೆ ಹಲವು ಕಡೆ ಭೂ ಕುಸಿತವಾಗುತ್ತಲಿದೆ .ಇವುಗಳ‌ ಆಧಾರದಲ್ಲಿ ರಾಜ್ಯದಲ್ಲಿ ಜಲಪ್ರಳಯವಾಗುತ್ತಿದ್ದು ಶ್ರೀಗಳ‌ ಭವಿಷ್ಯ ನಿಜವಾಗಿದ್ದು ಜನರಲ್ಲಿ ಅಚ್ಚರಿಯೊಂದಿಗೆ ಆತಂಕವನ್ನು ಸೃಷ್ಟಿ ಸಿದೆ. ಒಟ್ಟಿನಲ್ಲಿ ಪ್ರಕೃತಿ ನಾಶ‌ ಹಾಗೂ ಇದರ ಮೇಲಿನ ಮನಕುಲದ ಹಟ್ಟಹಾಸ ಜನರನ್ನು ಇಂತಹ ಪ್ರಕೃತಿ ಮುನಿಸಿಗೆ ಕಾರಣವಾಗಿದ್ದು ಶ್ರೀಗಳ ಭವಿಷ್ಯಕ್ಕೆ ಪುಷ್ಟಿ ನೀಡಿದಂತಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ