Breaking News

ರಾಜರಾಜೇಶ್ವರಿ ನಗರ: ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಿಂದ ಮತ್ತದೇ ಸುಲಿಗೆ

Spread the love

ಬೆಂಗಳೂರು: ಕಿಲ್ಲರ್ ಕೊರೊನಾ ಹೆಸರಲ್ಲಿ ಖಾಸಾಗಿ ಆಸ್ಪತ್ರೆಗಳು ಸುಲಿಗೆಗೆ ನಿಂತಿದ್ದಾವೆ. ರಾಜಾರೋಷವಾಗಿ ಹಗಲು ದರೋಡೆ ಮಾಡ್ತಿವೆ ಎಂದು ರಾಜರಾಜೇಶ್ವರಿ ನಗರದಲ್ಲಿರುವ ಸ್ಪರ್ಶ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಕೊರೊನಾ ಸೋಂಕಿತ ರೋಗಿಯೊಬ್ಬರಿಗೆ 5 ದಿನಕ್ಕೆ ಬರೋಬ್ಬರಿ 1 ಲಕ್ಷದ 80 ಸಾವಿರ ಬಿಲ್ ಆಗಿದೆಯಂತೆ. ಪ್ರತ್ಯೇಕ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಅಂತಾ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರಂತೆ.

ಆದ್ರೆ ರೋಗಿ ಜನರಲ್ ವಾರ್ಡ್​ಗೆ ಅಡ್ಮಿಟ್ ಆಗಿದ್ದು ಅದೇ ವಾರ್ಡ್​ನಲ್ಲಿ 15 ರೋಗಿಗಳಿದ್ದರು. ಆ 15 ಮಂದಿಗೂ 4 ನರ್ಸ್ ಹಾಗೂ ಒಬ್ಬ ಡಾಕ್ಟರ್ 2 ಟೆಕ್ನಿಶಿಯನ್ಸ್ ಬಂದು ನೋಡಿಕೊಳ್ಳುತ್ತಿದ್ದಾರಂತೆ.

ಮಾಧ್ಯಮಗಳಿಗೆ ಹೇಳಬೇಡಿ..
ಆದರೆ ವಿಪರ್ಯಾಸ ಅಂದ್ರೆ ಒಬ್ಬೊಬ್ಬ ರೋಗಿ ಮೇಲೂ ಸಪರೇಟ್ ಪಿಪಿಇ ಕಿಟ್ ಬಿಲ್ ಹಾಕಿದ್ದರಂತೆ. ಜೊತೆಗೆ ಬ್ಲಡ್ ಟೆಸ್ಟ್, ಯೂರಿನ್ ಟೆಸ್ಟ್ ಅಂತಾ 27 ಸಾವಿರದಷ್ಟು ಬಿಲ್ ಮಾಡಿದ್ದಾರಂತೆ. ಈ ಬಗ್ಗೆ ರೋಗಿಯೊಬ್ಬರು ಪ್ರಶ್ನಿಸಿದರೇ ಉಡಾಫೆ ಉತ್ತರ ಕೊಟ್ಟಿದ್ದಾರಂತೆ. ಕೊನೆಗೆ ಇದರ ಬಗ್ಗೆ ಮಾಧ್ಯಮದಲ್ಲಿ ಹೇಳಬೇಡಿ ಹಣ ವಾಪಸ್ ಕೊಡ್ತೀವಿ ಅಂತಾನೂ ಆಮಿಷ ನೀಡಿದ್ದಾರಂತೆ.

15 ರೋಗಿಗಳಿಗೂ ಡಿವೈಡ್ ಮಾಡಿ ಪಿಪಿಇ ಕಿಟ್ ದರ ಹಾಕಬೇಕಿತ್ತು. ಆದ್ರೆ ಇವರು ಒಬ್ಬೊಬ್ಬ ರೋಗಿಗೂ ಸಪರೇಟ್ ಬಿಲ್ ಮಾಡಿ ಹಣ ದೋಚ್ತಿದ್ದಾರೆ. ಈ ಹಿಂದೆಯೂ ಹೀಗೆಯೆ ಮಾಡಿ ಬಿಬಿಎಂಪಿ ಅಧಿಕಾರಿಗಳಿಂದ ದಂಡಕ್ಕೆ ಒಳಗಾಗಿದ್ರು. ಸ್ಪರ್ಶ್ ಆಸ್ಪತ್ರೆಯವರು ಹಗಲು ದರೋಡೆ ಮಾಡ್ತಿದ್ದಾರೆ ಎಂದು ಸೋಂಕಿತರು ಆರೋಪಿಸಿದ್ದಾರೆ. ಕೇವಲ ಇದೊಂದೇ ಆಸ್ಪತ್ರೆ ಅಲ್ಲ. ಕೊರೊನಾ ಬಂದಾಗಿನಿಂದ ಅನೇಕ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಲು ಒಂದಲ್ಲಾ ಒಂದು ಮಾರ್ಗ ಹುಡುಕಿಕೊಂಡಿವೆ.

 


Spread the love

About Laxminews 24x7

Check Also

RSS ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ

Spread the loveಕಲಬುರಗಿ: “ಆರ್​ಎಸ್​ಎಸ್​ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ