ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಂಬಂಧಿಕರ ನಿವಾಸಗಳ ಮೇಲೆ ಇಂದು ಬೆಳಗ್ಗೆ 6 ಗಂಟೆಯಿಂದ ಸಿಬಿಐ ನಡೆಸುತ್ತಿದ್ದ ದಾಳಿ ಅಂತ್ಯಗೊಂಡಿದೆ.
ವಾಡಿಕೆಯ ಪ್ರಕಾರ ಸಿಬಿಐ,ಇಡಿ ಮುಂತಾದ ತನಿಖಾ ಸಂಸ್ಥೆಗಳು ದಾಳಿ ನಡೆಸಿದ ಬಳಿಕ, ಆರೋಪಿಗಳನ್ನು ತತ್ಕ್ಷಣ ಬಂಧಿಸುವುದಿಲ್ಲ. ಅಕಸ್ಮಾತ್ ಆರೋಪಿಗಳು ವಿದೇಶಕ್ಕೆ ಪರಾರಿಯಾಗುವ ಅಥವಾ ಸಾಕ್ಷ್ಯ/ದಾಖಲೆಗಳನ್ನು ನಾಶ ಪಡಿಸುತ್ತಾರೆ ಎಂಬ ಗುಮಾನಿ ಬಂದ್ರೆ ಬಂಧನಕ್ಕೆ ಮುಂದಾಗುತ್ತದೆ. ಪ್ರಸ್ತುತ, ಡಿ.ಕೆ.ಶಿವಕುಮಾರ್ ಮನೆ ಸೇರಿ ಹಲವೆಡೆ ಸಿಬಿಐ ದಾಳಿ ನಡೆಸಿದ ವಿಚಾರದಲ್ಲಿ ತಕ್ಷಣಕ್ಕೆ. ಸಿಬಿಐ ಬೆಳಗ್ಗೆಯಿಂದ ವಶಪಡಿಸಿಕೊಂಡಿರುವ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಲಿದೆ.
ನಂತರ, ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡುವ ಸಾಧ್ಯತೆಯಿದೆ. ಇಂದು ವಶಕ್ಕೆ ಪಡೆದ ವಸ್ತುಗಳು, ದಾಖಲೆಗಳು, ಚಿನ್ನಾಭರಣ, ಹಣದ ಮೂಲ ಬಗ್ಗೆ ಮಾಹಿತಿ ನೀಡಿ, ಸಹಿ ಪಡೆಯಲಿದೆ ಸಿಬಿಐ. ಡಿ.ಕೆ.ಶಿವಕುಮಾರ್ ಕುಟುಂಬದ ಎದುರಲ್ಲೇ ಮಹಜರು ನಡೆಯಲಿದೆ. ಬಳಿಕ, ವಿಚಾರಣೆಗೆ ಹಾಜರಾಗಲು ಡಿಕೆಶಿಗೆ ಸಿಬಿಐ ಸೂಚಿಸುವ ಸಾಧ್ಯತೆಯಿದೆ.