ಬಾಗಲಕೋಟೆ: ಭೂ ಸುಧಾರಣ ಕಾಯ್ದೆ ಹಾಗೂ ಎಪಿಎಂಸಿ ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್‍ಗೆ ಕರೆ ನೀಡಿದ್ದು, ಬಾಗಲಕೋಟೆಯಲ್ಲಿ ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಾಗಲಕೋಟೆಯಲ್ಲಿ ಜನಜೀವನ ಯಥಾ ಸ್ಥಿತಿಯಲ್ಲಿದೆ. ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸೇರಿದಂತೆ 10 ಕ್ಕೂ ಹೆಚ್ಚು ಸಂಘಟನೆಗಳಿಂದ ಇಂದಿನ ಬಂದ್‍ಗೆ ಕೇವಲ ನೈತಿಕ ಬೆಂಬಲ ಸೂಚಿಸಲಾಗುತ್ತಿದೆ.
ಇಳಕಲ್ ಹಾಗೂ ಜಮಖಂಡಿ ರೈತರಿಂದ ಇಂದು 10 ಗಂಟೆಗೆ ಪ್ರತಿಭಟನೆ ನಡೆಸಲಿದ್ದು, ಅಂಗಡಿಮುಂಗಟ್ಟು ತೆರೆದಿದ್ದು, ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. 28ರ ಬಂದ್‍ಗೆ ಜಿಲ್ಲೆಯನ್ನ ಸಂಪೂರ್ಣ ಬಂದ್ ಮಾಡಲು ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ಇಂದು ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ.

ರಾಜ್ಯದಾದ್ಯಂತ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡಲಿದ್ದು, ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಆಗಲಿದೆ. ತಾಲೂಕು ಕೇಂದ್ರಗಳಲ್ಲೂ ರಸ್ತೆಗಳನ್ನು ಬಂದ್ ಮಾಡಲು ನಿರ್ಧಾರ ಮಾಡಲಿದ್ದು, ಗ್ರಾಮಗಳಲ್ಲೂ ರಸ್ತೆ ತಡೆದು ರೈತರಿಂದ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ತರಲು ಉದ್ದೇಶಿಸಿರುವ ಕೃಷಿ ಮಸೂದೆ ವಿರೋಧಿಸಿ 2000ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶದ್ಯಾಂತ ಪ್ರತಿರೋಧ್ ದಿವಸ್ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿಯೂ ಇದರ ಪರಿಣಾಮ ಇರಲಿದೆ.
Laxmi News 24×7