Breaking News

ಗೂಡ್ಸ್ ರೈಲು ಅಡಿಗೆ ಬಿದ್ದ ಎರಡು ವರ್ಷದ ಬಾಲಕ ಬಚಾವ್​ ಆಗಿದ್ದು ಹೇಗೆ ನೋಡಿ..

Spread the love

ಫರೀದಾಬಾದ್​: ಹರಿಯಾಣದ ಫರೀದಾಬಾದ್ ಜಿಲ್ಲೆಯ ವಲ್ಲಭಗಢ ರೈಲ್ವೆ ನಿಲ್ದಾಣದಲ್ಲಿ ಎರಡು ವರ್ಷದ ಬಾಲಕನೊಬ್ಬ ಗೂಡ್ಸ್ ರೈಲಿನ ಅಡಿಗೆ ಬಿದ್ದು ಅದೃಷ್ಟವಶಾತ್ ಒಂದಿನಿತೂ ಗಾಯವಿಲ್ಲದೆ ಬಚಾವ್ ಆಗಿದ್ದಾನೆ. ಈ ಕುರಿತ ವಿಡಿಯೋ ವೈರಲ್​ ಆಗಿದೆ.

ಗೂಡ್ಸ್ ರೈಲ್​ ವೇಗವಾಗಿ ಸಂಚರಿಸುತ್ತಿದ್ದ ವೇಳೆ, ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಹಳಿಯ ಮೇಲೆ ಈ ಬಾಲಕ ಆಡವಾಡುತ್ತಿದ್ದ. ದೂರದಿಂದ ಇದನ್ನು ಗಮನಿಸಿದ ಗೂಡ್ಸ್ ರೈಲಿನ ಲೋಕೊ ಪೈಲಟ್ ಕೂಡಲೇ ತುರ್ತು ಬ್ರೇಕ್ ಹಾಕಿದ್ದ. ಆದರೆ, ಅಷ್ಟರಲ್ಲಾಗಲೇ ಸಮಯ ಮೀರಿತ್ತು. ಬಾಲಕ ರೈಲಿನ ಕೆಳಗಿದ್ದ!

ಪೈಲಟ್ ದೀವಾನ್ ಸಿಂಗ್ ಮತ್ತು ಅಸಿಸ್ಟಂಟ್ ಪೈಲಟ್ ಅತುಲ್ ಆನಂದ್ ರೈಲಿನಿಂದ ಕೆಳಗಿಳಿದು ಬಂದು ಮಗುವಿನ ಸ್ಥಿತಿಗತಿ ಪರಿಶೀಲಿಸಲು ಮುಂದಾದಾಗ, ರೈಲಿನ ಕೆಳಗಿನಿಂದ ಮಗು ಅಳುತ್ತಿರುವ ಸದ್ದು ಕೇಳಿಸಿದೆ.

ಇಲ್ಲಿಂದಾಚೆಗಿನ ವಿಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿರುವ ದೃಶ್ಯ ಪ್ರಕಾರ, ಮಗು ಅಳುತ್ತಿದ್ದ ಬೆನ್ನಿಗೆ ಅಲ್ಲಿ ಇನ್ನೊಬ್ಬ ಬಾಲಕ (ಆತನ ಸಹೋದರ)ನನ್ನು ರೈಲ್ವೆ ನೌಕರರೊಬ್ಬರು ಹಿಡಿದು ವಿಚಾರಿಸುತ್ತಿರುವ ದೃಶ್ಯವಿದೆ. ಅದೇ ವೇಳೆ ಅಲ್ಲಿಗೆ ಮಹಿಳೆಯೊಬ್ಬರು ಬಂದ ದೃಶ್ಯವಿದ್ದು, ಮಗು ನಿನ್ನದಾ ಎಂದು ಕೇಳುತ್ತಿರುವುದು ದಾಖಲಾಗಿದೆ. (ಏಜೆನ್ಸೀಸ್)


Spread the love

About Laxminews 24x7

Check Also

ಕೇಸರಿ ಟವೆಲ್​ ಹಾಕಿಕೊಂಡಿದ್ದಕ್ಕೆ ಯುವಕನ ಮೇಲೆ ಹಲ್ಲೆ; ಮೂವರ ಬಂಧನ

Spread the loveಬೆಂಗಳೂರು, ಆಗಸ್ಟ್​ 26: ಕೇಸರಿ ಟವೆಲ್ (Saffron towel)​ ಹಾಕಿಕೊಂಡಿದ್ದಕ್ಕೆ ಸ್ಲಿಂದರ್ ಕುಮಾರ್ ಎಂಬುವರ ಮೇಲೆ ಮೂವರು ಯುವಕರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ