Breaking News

ಕೆಪಿಸಿಸಿ_ಕಾರ್ಯಾಧ್ಯಕ್ಷ_ಸತೀಶ_ಜಾರಕಿಹೊಳಿ_ನೇತೃತ್ವದಲ್ಲಿ_ಸಹಕಾರ_ಸಚಿವ_ಟಿ_ಸೋಮಶೇಖರಗೆ_ಮನವಿ…

Spread the love

ಬೆಂಗಳೂರು- ಬೆಂಗಳೂರಲ್ಲಿ ಹಂಗೇನಿಲ್ಲ,ಎಲ್ಲಾರೂ ಸೇರ್ಕೊಂಡು ಮನವಿ ಕೊಡ್ತಾರೆ ಅನ್ನೋದು,ಪೋಟೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ.

ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿಯ ನಿಯೋಗ ಇಂದು,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಸಹಕಾರ,ಮತ್ತು ಎಪಿಎಂಸಿ ಸಚಿವ ಟಿ‌.ಸೋಮಸೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು.

ಬೆಳಗಾವಿ ಎಪಿಎಂಸಿಯ ಬಾಕಿ ಉಳಿದಿರುವ ಆರ್ ಡಿ ಪಿ ಯೋಜನೆಯ 15 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು,ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ,ಹೆಚ್ಚುವರಿಯಾಗಿ 15 ಕೋಟಿ ರೂ ಅನುದಾನ ನೀಡಬೇಕೆಂದು ನಿಯೋಗ ಸಚಿವರಲ್ಲಿ ಮನವಿ ಮಾಡಿಕೊಂಡಿತು.

ಬೆಳಗಾವಿ ಎಪಿಎಂಸಿ ಆವರಣದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಕಾರರು ಒಂದು ಕೋಟಿ ರೂ ವರೆಗೆ ಮಳಿಗೆಗಳನ್ನು ಖರೀಧಿ ಮಾಡಿದ್ದಾರೆ,ಕೋವೀಡ್ ಹಿನ್ನಲೆಯಲ್ಲಿ ಅವರಿಗೆ ಕಂತು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ,ಐದು ವರ್ಷಗಳವರೆಗೆ ಕಂತು ತುಂಬುವ ಅವಧಿ ನೀಡುವಂತೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಬೆಳಗಾವಿಯ ಎಪಿಎಂಸಿ ನಿಯೋಗ ಸಚಿವ ಟಿ.ಸೋಮಶೇಖರ ಅವರಲ್ಲಿ ಮನವಿ ಮಾಡಿಕೊಂಡಿತು.

ಬೆಳಗಾವಿ ಎಪಿಎಂಸಿ ಅದ್ಯಕ್ಷ ಯುವರಾಜ ಕದಂ,ಲಕ್ಷ್ಮೀ ಹೆಬ್ಬಾಳಕರ ,ಸುಧೀರ ಗಡ್ಡೆ ,ಯುವ ಕಾಂಗ್ರೆಸ್ ಮುಖಂಡ ತೌಸೀಫ್ ಫನೀಬಂದ್, ಬೆಳಗಾವಿ ತಾಪಂ ಸದಸ್ಯ ನೀಲೇಶ್ ಚಂದಗಡಕರ,ಉಪಸ್ಥಿತರಿದ್ದರು.


Spread the love

About Laxminews 24x7

Check Also

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

Spread the loveಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ