Breaking News

ಚೆನ್ನಮ್ಮ ಮೂರ್ತಿ ವಿವಾದ: ತಡೆಯಾಜ್ಞೆ ತೆರವುಗೊಳಿಸಿದ ಧಾರವಾಡ ಪೀಠ- ಬಸವರಾಜ್ ಬೊಮ್ಮಾಯಿ

Spread the love

ಬೆಂಗಳೂರು: ಶಿಗ್ಗಾಂವಿ ನಗರದಲ್ಲಿ ವೀರ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿಯನ್ನು ಸ್ಥಾಪಿಸಲು ಇದ್ದ ತಡೆಯಾಜ್ಞೆಯನ್ನು ಧಾರವಾಡದ ಉಚ್ಚ ನ್ಯಾಯಾಲಯ ಇಂದು ತೆರವುಗೊಳಿಸಿ ಮೂರ್ತಿ ಸ್ಥಾಪನೆಗೆ ದಾರಿ ಸುಗಮವಾಗಿಸಿದೆ‌ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ಹಾವೇರಿಯ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಧಾರವಾಡ ಉಚ್ಚನ್ಯಾಯಾಲಯದಿಂದ ಆದೇಶ ತಲುಪಿದ ತಕ್ಷಣ ಶಿಗ್ಗಾಂವಿ ನಗರದಲ್ಲಿ ಮೂರ್ತಿ ಸ್ಥಾಪಿಸಲು ಅನುಮತಿಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದೇನೆ ಎಂದಿದ್ದಾರೆ.

Basavaraj S Bommai

@BSBommai

ಇಂದು ಘನತೆವೆತ್ತ ಉಚ್ಚನ್ಯಾಯಾಲಯ, ಧಾರವಾಡ. ಶಿಗ್ಗಾಂವಿ ನಗರದಲ್ಲಿ ವೀರ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿಯನ್ನು ಸ್ಥಾಪಿಸಲು ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಮೂರ್ತಿ ಸ್ಥಾಪನೆಗೆ ದಾರಿ ಸುಗಮವಾಗಿಸಿದೆ‌.

View image on Twitter
16 people are talking about this

ಈಗಾಗಲೇ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ತಯಾರಿಸಿ ಶಿಗ್ಗಾಂವಿ ನಗರದ ಹೊರವಲಯದಲ್ಲಿ ಇಡಲಾಗಿದ್ದು ಅನುಮತಿ ಆದೇಶ ಬಂದ ತಕ್ಷಣ ನಗರದಲ್ಲಿ ಮೂರ್ತಿ ಸ್ಥಾಪನೆಗೆ ಕೂಡಲೇ ಎಲ್ಲ ಕ್ರಮ ಜರಗಿಸಲಾಗುವುದು ಎಂದಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಒಬ್ಬ ಸ್ವಾತಂತ್ರ್ಯ ಸೇನಾನಿ ಮಹಿಳೆಯಾಗಿದ್ದು ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಹೋರಾಟ ತ್ಯಾಗ ಇಂದಿನ ಯುವಜನಾಂಗಕ್ಕೆ ಸ್ಪೂರ್ತಿಯಾಗಿದೆ. ಆದುದರಿಂದ ಎಲ್ಲ ಜನಸಮೂಹ ಒಟ್ಟಾಗಿ ಇದರಲ್ಲಿ ಪಾಲ್ಗೊಳ್ಳಲು ವಿನಂತಿಸುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ