ಅಥಣಿ : ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಮಾಯನಟ್ಟಿಯಿಂದ ಶಿವನೂರು ಗ್ರಾಮದವರೆಗೆ 6 ಕಿಲೋ ಮೀಟರ್ ರಸ್ತೆ ಕೆಟ್ಟು ಗಿಡಗಂಟಿ ಮುಳ್ಳುಗಳು ಬೆಳೆದು ರಸ್ತೆ ಸಂಚಾರಕ್ಕೆ ಅವಕಾಶವಿಲ್ಲದಂತೆ ತುಂಬಾ ಕೆಟ್ಟು ಹೋಗಿದೆ ಎಂದು ಆರೋಪಿಸಿ ರಿಪೆರಿಗೆ ಒತ್ತಾಯಿಸಿ ಪಾರ್ಥನಹಳ್ಳಿ ಗ್ರಾಮ ಪಂಚಾಯಿತಿಗೆ ಶ್ರೀಶೈಲ್ ಕೆಂಪವಾಡ ನೇತೃತ್ವದಲ್ಲಿ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ವ್ಯಕ್ತಪಡಿಸಿದರು .
ಗ್ರಾಮಸ್ಥ ಶ್ರೀಶೈಲ್ ಕೆಂಪವಾಡ ಮಾತನಾಡುತ್ತಾ ಕಳೆದ ಎರಡು ಮೂರು ವರ್ಷಗಳಿಂದ ಮಾಯನಟ್ಟಿಯಿಂದ ಶಿವನೂರು ವರೆಗೆ ರಸ್ತೆ ತುಂಬಾ ಕೆಟ್ಟು ಹೋಗಿದ್ದು ಈಗಾಗಲೇ ಹಲವಾರು ಬಾರಿ ರಿಪೇರಿಗೆ ಒತ್ತಾಯಿಸುತ್ತಾ ಬಂದಿದ್ದೇವೆ . ಹಲವಾರು ಅಪಘಾತಗಳು ಸಂಭವಿಸಿವೆ ಮೊನ್ನೆ ಯೊಬ್ಬರ ಬೈಕ್ ಸ್ಕಿಡ್ ಆಗಿ ಕಾಲು ಕಟ್ಟಾಗಿದೆ ಅಲ್ಲದೆ ಹಲವಾರು ಜನ ಬಿದ್ದು ಕಾಲಿಗೆ ಪೆಟ್ಟಾಗಿದೆ ಅಲ್ಲದೆ ಹಲವಾರು ಜನರಿಗೆ ಮುಳ್ಳು ಕಂಟೆಗಳು ಚುಚ್ಚಿ ಕಣ್ಣುಗಳಿಗೆ ಮೈ ಕೈಗೆ ಪರಚಿ ಗಾಯವಾಗಿದೆ ಕೂಡಲೇ ರಸ್ತೆ ಸರಿಪಡಿಸಬೇಕು ರಸ್ತೆ ಸರಿಪಡಿಸುವವರೆಗೆ ನಾವು ಪಂಚಾಯಿತಿ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದರು
ಈ ವೇಳೆ ಮಾತನಾಡಿದ
ಪಿಡಿಓ ಸುರೇಶ ದೊಡಮನಿ ಮೆಲಾಧಿಕಾರಿಗಳಿಗೆ ಸಮಸ್ಯೆ ಕುರಿತು ಮಾಹಿತಿ ನಿಡಿದ್ಧೆನೆ.
ತಾಪ ಕಾರ್ಯ ನಿರ್ವಹಣಾಧಿಕಾರಿ ರವಿ ಬಂಗಾರಪ್ಪನವರ ಅವರು ನಾಳೆ ಈ ಕುರಿತು ಪರಿಶೀಲಿಸಿ ಕಾರ್ಯ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ ಕಾರಣ ಕೂಡಲೇ ಈ ಕುರಿತು ಕೂಡಲೇ ರಿಪೆರಿ ಕಾರ್ಯ ಆರಂಭಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು .
ಹಿರಿಯರ ಮಧ್ಯಸ್ಥಿಕೆ ಬಿಗ ತೆರವು:
ಗ್ರಾಮದ ಮುಖಂಡ ಎಪಿಎಂಸಿ ಸದಸ್ಯ ಸಿದರಾಯ ಬಸಗೊಂಡ ತೇಲಿ ಈ ಸಮಯದಲ್ಲಿ
ಮಾತನಾಡುತ್ತಾ ಜನರಿಗೆ ರಸ್ತೆ ರಿಪೆರಿಯಿಲೢದೆ ಕೆಟ್ಟು ಸಮಸ್ಯೆಯಾಗಿರುವುದು ನಿಜ.ತಾಲ್ಲೂಕಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರವಿ ಬಂಗಾರಪ್ಪನವರ ಅವರ ಜೊತೆ ಮಾತನಾಡಲಾಗಿದೆ ಅವರು ರಸ್ತೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಈ ಕೂಡಲೇ ರಸ್ತೆ ರಿಪೆರಿ ಕೆಲಸ ಆರಂಭಿಸುತಿದ್ಧೆವೆ. ನಮ್ಮ ಗ್ರಾಮಸ್ಥರು ಎಲ್ಲ ಒಗ್ಗಟ್ಟಿನಿಂದ ಇದ್ದು ಈ ಕೂಡಲೇ ರಸ್ತೆ ರಿಪೇರಿ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.
ಹಿರಿಯರ ಮಧ್ಯಸ್ಥಿಕೆಯೊಂದಿಗೆ ಬೀಗ ತೆರವು ಮಾಡಿ ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು ರಸ್ತೆ ಕಾಮಗಾರಿ ಆರಂಭದ ಕಡೆಗೆ ತೆರಳಿದರು .
ಈ ವೇಳೆ ಗ್ರಾಮದ ಪರಗೊಂಡ ಮಗದುಮ, ತಾಪ ಸದಸ್ಯ ಅಪ್ಪಣ್ಣ ಮುಜಗೊಣಿ, ಶ್ರೀಶೈಲ್ ಈರಪ್ಪ ಕೆಂಪವಾಡ, ರವಿ ಮಗದುಮ, ರಾಯಪ್ಪ ಮಗದುಮ, ಸಿದ್ದಪ್ಪ ಮಗದುಮ ಮುಂತಾದವರು ಉಪಸ್ಥಿತರಿದ್ದರು