ಬೆಂಗಳೂರು: ಜೆಡಿಎಸ್ ನವರು ಆರ್‍ಎಸ್‍ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಜೆಡಿಎಸ್ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ಪಕ್ಷದ ದೇವೇಗೌಡರು ಹಾಗೂ ಕುಟುಂಬ ಒಂದು ಅವಕಾಶವಾದಿ. ಪಕ್ಷಸ್ವಾರ್ಥ ಇರುವವರು. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಬಿಜೆಪಿ ಜೊತೆಯೂ ಹೋಗುತ್ತಾರೆ. ಆರ್ ಎಸ್ ಎಸ್ ಜೊತೆ ಸೇರಿದ್ರು ಸೇರಿಕೊಳ್ಳಬಹುದು. ಅವರಿಗೆ ಅವಕಾಶವಷ್ಟೆ ಮುಖ್ಯ ಎಂದು ಟಾಂಗ್ ನೀಡಿದ್ದಾರೆ.
ಅನೇಕ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷವೇ ಮೂಲ. ಬಿಜೆಪಿ, ಜೆಡಿಎಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಸೇರಿ ಇತರೆ ಪಕ್ಷಗಳಿಗೆ ಕಾಂಗ್ರೆಸ್ ಮೂಲ. ಕಾಂಗ್ರೆಸ್ ಒಂದು ರೀತಿ ತಾಯಿ ಪಕ್ಷ ಇದ್ದಂತೆ. ನಾನು ಆರು ವರ್ಷ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಆಗಿನಿಂದಲೂ ರಮೇಶ್ ಬಾಬು ಕ್ರಿಯಾಶೀಲ ನಾಯಕರಾಗಿದ್ದರು ಹೆಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ವೀರರ ಪಾಟೀಲ್ ಹೀಗೆ ಎಲ್ಲರೂ ಕಾಂಗ್ರೆಸ್ಸಿನವರೇ ಆಗಿದ್ದಾರೆ. ಕಾಂಗ್ರೆಸ್ ಅಂದ್ರೆ ಒಂದು ಪಕ್ಷ ಅಲ್ಲ, ಚಳುವಳಿ ಇದ್ದಂತೆ. ಬಹಳ ಜನ ನಾಯಕರು ಕಾಂಗ್ರೆಸ್ಸಿನಿಂದಲೇ ಅನ್ಯ ಪಕ್ಷಗಳಿಗೆ ಹೋಗಿದ್ದಾರೆ. ದೇವೇಗೌಡರು ಕಾಂಗ್ರೆಸ್ಸಿನಲ್ಲಿ ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. 1962 ರಲ್ಲಿ ಟಿಕೆಟ್ ಸಿಗದಾಗ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು ಎಂದು ವಿವರಿಸಿದರು
Laxmi News 24×7