Breaking News
Home / new delhi / ʼಆಕೆ ಸಂಜನಾ ಗಿಲ್ರಾನಿ ಅಲ್ಲ ಮಾಹಿರಾʼ: ನಟಿಮಣಿಯ ಬುರ್ಕಾವತಾರ ಬಯಲು..!

ʼಆಕೆ ಸಂಜನಾ ಗಿಲ್ರಾನಿ ಅಲ್ಲ ಮಾಹಿರಾʼ: ನಟಿಮಣಿಯ ಬುರ್ಕಾವತಾರ ಬಯಲು..!

Spread the love

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿರುವ ನಟಿ ‘ಸಂಜನಾ ಗಲ್ರಾನಿʼ ಬಗ್ಗೆ ಮತ್ತೊಂದು ಹೊಸ ವಿಷ್ಯ ಬಹಿರಂಗವಾಗಿದ್ದು, ಸಮಾಜೀಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಆಕೆ ಸಂಜನಾ ಗಿಲ್ರಾನಿ ಅಲ್ಲ ಮಹಿರಾ ಎಂದು ಹೇಳಿದ್ದಾರೆ.

ಹೌದು, ಪ್ರಶಾಂತ್‌ ಸಂಬರಗಿ ಈ ಕುರಿತು ಪೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದು, ‘ ಸಂಜನಾ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ. ನಮ್ಮ ಕರ್ನಾಟಕದಲ್ಲಿ ಲವ್ ಜಿಹಾದ್ ತಾಂಡವವಾಡುತ್ತಿವೆ’! ಎಂದು ಬರೆದುಕೊಂಡಿದ್ದಾರೆ.

ಇನ್ನು ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಸಂಬಂಧ ದೃಢೀಕರಣ ಪ್ರಮಾಣಪತ್ರವೊಂದನ್ನು ಸಂಬರಗಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಮೊನ್ನೆಯಷ್ಟೇ ವೈರಲ್‌ ಆಗಿದ್ದ ಸಂಜನಾರ ಪೋಟೋ ಅವ್ರ ಮದುವೆಯದ್ದು ಅನ್ನೋ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಇನ್ನು ಇನ್ಟಗ್ರಾಮ್‌ನಲ್ಲಿ ಸಂಜನಾ ಬುರ್ಕಾ ಧರಿಸಿ ಪೋಟೋ ಹಾಕಿದ್ದು, 2014ರಲ್ಲಿ ಇಸ್ಲಾಂ ಧರ್ಮವನ್ನ ಹೊಗಳಿ ಪೋಸ್ಟ್‌ವೊಂದನ್ನ ಹಾಕಿದ್ರು ಎನ್ನುವುದು ಸಧ್ಯ ಬಹಿರಂಗವಾಗಿದೆ.


Spread the love

About Laxminews 24x7

Check Also

ಮೂಡಲಗಿ | ಕಾರು ಡಿಕ್ಕಿ: ಬಾಲಕ ಸಾವು

Spread the love ಮೂಡಲಗಿ: ತಾಲ್ಲೂಕಿನ ನಾಗನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಸೋಮವಾರ ಮೂಡಲಗಿ- ಗೋಕಾಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ