Breaking News

ರಾಜ್ಯ ಸರ್ಕಾರಕ್ಕೆ ಬಂಪರ್​ ಆಫರ್​ ಕೊಟ್ಟ ಶಾಸಕ ಜಮೀರ್​

Spread the love

ಬೆಂಗಳೂರು: ಡ್ರಗ್ಸ್​ ಮಾಫಿಯಾದಲ್ಲಿ ತನ್ನ ಹೆಸರನ್ನು ಪ್ರಸ್ತಾಪಿಸಿರುವ ಪ್ರಶಾಂತ್​ ಸಂಬರಗಿ ಯಾರೆಂದು ನನಗೆ ಗೊತ್ತೇ ಇಲ್ಲ ಎಂದಿರುವ ಶಾಸಕ ಜಮೀರ್​ ಅಹ್ಮದ್​, ಡ್ರಗ್ಸ್ ಕೇಸ್​ನಲ್ಲಿ ನನ್ನ ಕೈವಾಡ ಇರುವುದು ಸಾಬೀತು ಮಾಡಲಿ. ಒಂದು ವೇಳೆ ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ ಸರ್ಕಾರಕ್ಕೇ ಬರೆದುಕೊಡುವೆ ಎಂದು ಸವಾಲು ಹಾಕಿದ್ದಾರೆ.

 ಶೇಖ್ ಫಾಸಿಲ್ ಫಜೀಲ್ ನನಗೆ ಗೊತ್ತು.

ಆತ ನಾಲ್ಕು ವರ್ಷಗಳಿಂದ ನನ್ನ ಜತೆ ಇಲ್ಲ. ಯಾರೋ ಒಬ್ಬರು ನನ್ನ ಜತೆ ನಿಂತು ಫೋಟೋ ತೆಗೆಸಿಕೊಂಡಾಕ್ಷಣ ಅವರು ಮಾಡಿದ ಕೆಲಸಕ್ಕೆಲ್ಲ ನಾನು ಜವಾಬ್ದಾರನಲ್ಲ. ಇನ್ನು ಸಂಜನಾ ಯಾರೆಂದು ಗೊತ್ತಿಲ್ಲ. ನೇರವಾಗಿ ಅವರನ್ನೂ ಭೇಟಿಯಾಗಿಲ್ಲ. ಅಂದ ಮೇಲೆ ಶ್ರೀಲಂಕಾಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ತನಿಖೆ ಮಾಡ್ಲಿ.. ಫಾಸಿಲ್​ನ ಫೋನ್ ಕಾಲ್ ರೆಕಾರ್ಡ್ ತೆಗೆಸಲಿ. ತನಿಖೆ ನಡೆಸಲಿ, ಸಂಪೂರ್ಣ ಸಹಕಾರ ಕೊಡ್ತೀನಿ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಸೂಕ್ತ ತನಿಖೆ ಮಾಡಲಿ ಎಂದು ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು. ‘ಮಾದಕ’ ನಟಿಗಾಗಿ ಹೆಂಡತಿಯನ್ನೇ ತೊರೆದ ರವಿಶಂಕರ್​!

ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್ ಫಾಸಿಲ್, ಡ್ರಗ್ಸ್ ಕೇಸ್​ನ ಆರೋಪಿಗಳ ಜೊತೆ ಲಿಂಕ್ ಇಟ್ಟುಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಈತನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಫಾಸಿಲ್​ ತಲೆಮರೆಸಿಕೊಂಡಿದ್ದಾನೆ.

ಈ ಹಿಂದೆ ಜಮೀರ್​ ಅಹ್ಮದ್​ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶೇಖ್ ಫಾಸಿಲ್, ಶಾಸಕರ ಜತೆ ತೆಗೆಸಿಕೊಂಡಿದ್ದ ಫೋಟೋಗಳು ಇದೀಗ ವೈರಲ್​ ಆಗಿವೆ. ಅಲ್ಲದೆ ಶ್ರೀಲಂಕಾದ ಕ್ಯಾಸಿನೋಗೆ ಜಮೀರ್ ಅಹ್ಮದ್​ ಕೂಡ ಹೋಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಬಾಂಬ್ ಸಿಡಿಸಿದ್ದರು. ಈ ಬಗ್ಗೆ ದಾಖಲೆಗಳು ಬೇಕಿದ್ರೆ ನೀಡ್ತೇನೆ ಎಂದಿದ್ದರು. ಈ ಆರೋಪ ಮಾಡಿದ ಪ್ರಶಾಂತ್​ ಸಂಬರಗಿ ವಿರುದ್ಧ ಜಮೀರ್​ ಕೇಸ್​ ದಾಖಲಿಸಿದ್ದಾರೆ. ಅಲ್ಲದೆ ಡ್ರಗ್ಸ್​ ಮಾಫಿಯಾದಲ್ಲಿ ನನ್ನ ಕೈವಾಡ ಇರುವುದು ಸಾಬೀತಾದ್ರೆ ತನ್ನೆಲ್ಲ ಆಸ್ತಿಯನ್ನೇ ಕೊಡುವುದಾಗಿ ಸವಾಲು ಹಾಕಿದ್ದಾರೆ.

ಡ್ರಗ್ಸ್​ ದಂಧೆ ಪ್ರಕರಣ; ಆಪ್ತನ ಮೂಲಕವೇ ಜಮೀರ್ ಅಹ್ಮದ್​ಗೆ ಸಂಕಷ್ಟ ಎದುರಾಗುತ್ತಾ?

ನನಗೆ ಮದುವೆ ಆಗಿಲ್ಲ ಎಂದ ಬೆನ್ನಲ್ಲೇ ನಟಿ ಸಂಜನಾರ ‘ಗಂಡ-ಹೆಂಡ್ತಿ’ ರಹಸ್ಯ ಬಯಲು?!

ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿbr


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ