ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಸಿಸಿಬಿ ತನಿಖೆ ನಡೆಸುತ್ತಿದೆ. ಕೆಲವರ ಬಣ್ಣ ಬಯಲಾಗಿದೆ. ಸದ್ಯದರಲ್ಲಿಯೇ ಪ್ರಕರಣದಲ್ಲಿ ಭಾಗಿಯಾಗಿದ ಎಲ್ಲರ ಬಣ್ಣ ಬಯಲಾಗುತ್ತಿದೆ ಎಂದಿದ್ದಾರೆ.
ಡ್ರಗ್ಸ್ ಪ್ರಕರಣವನ್ನ ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಹಿಂದಿನ ಸರ್ಕಾರದಂತೆ ನಾವು ನಿರ್ಲಕ್ಷ್ಯ ಮಾಡುವುದಿಲ್ಲ. ಎಂತಹ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ. ನ್ಯಾಯಾಯುತವಾಗಿ ತನಿಖೆ ನಡೆಸುತ್ತೇವೆ. ಸಿಸಿಬಿ ತನಿಖೆಯಿಂದ ಕೆಲವರ ಬಣ್ಣ ಬಯಲಾಗಿದೆ. ಸಧ್ಯದಲ್ಲಿಯೇ ಎಲ್ಲರ ಬಣ್ಣ ಬಯಲಾಗುತ್ತೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
Laxmi News 24×7