ನವದೆಹಲಿ : ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯೆಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದ್ದು, ಅದರ ನೇರ ಪರಿಣಾಮ ಫೋನ್ ಪೇ ಮೇಲೆ ಉಂಟಾಗಿ ಜನರು ಪರದಾಡುವಂತಾಗಿದೆ. .
ಹಣ ವರ್ಗಾವಣಾ ಮೊಬೈಲ್ ಆಪ್ ಫೋನ್ ಪೇ ಯೆಸ್ ಬ್ಯಾಂಕ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಇದೀಗ ಯೆಸ್ ಬ್ಯಾಂಕ್ ಮೇಲಿನ ನಿಷೇಧದಿಂದ ಫೋನ್ ಪೇ ಸೇವೆಗಳು ಸಿಗುತ್ತಿಲ್ಲ. ಈ ಕುರಿತು ಫೋನ್ ಪೇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡು ಜನರಲ್ಲಿ ಕ್ಷಮೆ ಯಾಚಿಸಿದೆ.
ಪ್ರೀತಿಯ ಗ್ರಾಹಕರೇ, ದೀರ್ಘಕಾಲದ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್ ಯೆಸ್ ಬ್ಯಾಂಕ್ ನ್ನು ಆರ್ ಬಿಐ ನಿಷೇಧಿಸಿದೆ. ಸೇವೆಗೆ ಮರಳುವಂತಾಗಲು ನಮ್ಮ ತಂಡ ಶ್ರಮಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಮತ್ತೆ ಮರಳಿ ಬರುತ್ತೇವೆ ಎಂದು ನಂಬಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಫೋನ್ ಪೇ ಸಿಇಓ ಸಮೀರ್ ನಿಗಮ್ ಟ್ವೀಟ್ ಮಾಡಿದ್ದಾರೆ.