ನೆಲಮಂಗಲ: ವಾರಾಂತ್ಯದಲ್ಲಿ ನಗರದಿಂದ ತಮ್ಮ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ಸಮಸ್ಯೆ ಎದುರಿಸುವ ಪ್ರಯಾಣಿಕರು, ಈಗ ಮತ್ತೊಂದು ಕಾರಣಕ್ಕೆ ಟ್ರಾಫಿಕ್ನಲ್ಲಿ ಗಂಟೆಗಳ ಕಾಲ ನಿಲ್ಲುವ ಪರಿಸ್ಥಿತಿ ಇಂದು ಎದುರಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್ ರಸ್ತೆಯ ಬದಿಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ.
ಈ ಹಿನ್ನೆಲೆಯಿಂದಾಗಿ ಮೊದಲೆ ಚಿಕ್ಕದಾಗಿರುವ ರಸ್ತೆಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿರುವುದರಿಂದ ವಾಹನ ಚಲಿಸಲಾಗದೆ ಒಂದು ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದಾಗಿ ಪ್ರಯಾಣಿಕರು ಟ್ರಾಫಿಕ್ನಲ್ಲಿ ನಿಂತು ಹೈರಾಣಾಗಿ ಹೋಗಿದ್ದಾರೆ.
Laxmi News 24×7