ಗೋಕಾಕ: ಕೊರೊನಾ ಸೋಂಕಿನಿಂದ ಉಸಿರಾಟ ತೊಂದರೆ ಅನುಭವಿಸುತ್ತಿವವರಿಗೆ ಉಚಿತ ಆಕ್ಸಿಜನ್ ಸಿಲಿಂಡರ್ ವಿತರಿಸುವ ಮೂಲಕ ಸತೀಶ ಜಾರಕಿಹೊಳಿ ಫೌಂಡೇಶನ್ ಗಮನ ಸೆಳೆಯುತ್ತಿದೆ.
ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪುತ್ರ ರಾಹುಲ್, ಹಾಗೂ ಪುತ್ರಿ ಪ್ರಿಯಾಂಕಾ ಆಕ್ಸಿಜನ್ ಸಿಲಿಂಡರ್ ವಿತರಿಸಿದರು.
ಕೋವಿಡ್ 19 ನಿಂದ ಬಳಲುತ್ತಿರುವ, ಕೆಲವರು ಹಣವಿಲ್ಲದೇ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವವರಿಗೆ ಗಿ ಸತೀಶ ಜಾರಕಿಹೊಳಿ ಪೌಂಡೇಶನ್ ಕೃತಕ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿದೆ. 10ಕ್ಕೂ ಹೆಚ್ಚು ಸಿಲಿಂಡರ್ ವಿತರಿಸಲಾಗಿದ್ದು, ಗೋಕಾಕ ನಗರ, ಯಮಕನಮರಡಿ ಹಾಗೂ ಗ್ರಾಮೀಣ ಪ್ರದೇಶಗಳ ಸೋಂಕಿತರಿಗೆ ನೆರವಾಗಲಿವೆ.
ಸದಾ ಸಮಾಜ ಸೇವೆಯಲ್ಲಿ ತೊಡಿಸಿಕೊಂಡಿರುವ ಸತೀಶ ಜಾರಕಿಹೊಳಿ ಪೌಂಢೇಶನ್, ಕಳೆದ ವರ್ಷ ಭೀಕರ ಪ್ರವಾಹ ಸಂಭವಿಸಿದ ಪ್ರದೇಶಗಳಲ್ಲಿ ಜನರಿಗೆ ಅಗತ್ಯ ವಸ್ತುಗಳ ಕಲ್ಪಿಸಿತ್ತು. ಕೋವಿಡ್ 19 ಸಮಯದಲ್ಲಿಯೂ ಅನೇಕ ಗ್ರಾಮಗಳಲ್ಲಿ ಉಚಿತ ಸ್ಯಾನಿಟೈಜರ್, ಮಾಸ್ಕ್ ಹಾಗೂ ಕಿಟ್ ನೀಡಿ ಗಮನ ಸೆಳೆದಿತ್ತು. ಇದೀಗ ಸೋಂಕಿತರಿಗಾಗಿ ಆಕ್ಸಿಜನ್ ಸಿಲಿಂಡರ್ ಕೊಡುಗೆಯಾಗಿ ನೀಡುತ್ತಿದೆ.
https://www.facebook.com/105350550949710/posts/190922549059176/?sfnsn=wiwspmo&extid=Ne148VulW5fLJemy&d=n&vh=e