ಬೆಳಗಾವಿ: ಶಿವಸೇನಾ ಕಾರ್ಯಕರ್ತರಿಗೆ ಮನಗುತ್ತಿ ಗ್ರಾಮಸ್ಥರೇ ತಕ್ಕ ಉತ್ತರ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹರಾಜರ ಮೂರ್ತಿ ವಿಚಾರವಾಗಿ ಶಾಸಕಿ ನಿಂಬಾಳ್ಕರ್ ಹೇಳಿಕೆ ನೀಡಿದ್ದು, ತಪ್ಪು. ಅವರಿಗೆ ಭಾಷಾ ಸಮಸ್ಯೆಯಿದೆ. ಹೀಗಾಗಿ ಅವರಿಂದ ತಪ್ಪಾಗಿದೆ. ಅವರಿಗೆ ಬುದ್ದಿ ಹೇಳುತ್ತೇವೆ ಎಂದರು.