ಬಳ್ಳಾರಿ: ಸರ್ಕಾರಿ ಶಿಶುಗೃಹದಲ್ಲಿ ಒಂದು ವರ್ಷದ ಹಿಂದೆ ರೈಲ್ವೆ ಬೋಗಿಯಲ್ಲಿ ಸಿಕ್ಕಿದ್ದ ಅನಾಥ ಮಗುವಿನ ಹುಟ್ಟುಹಬ್ಬವನ್ನು ಅಧಿಕಾರಿಗಳು ಆಚರಣೆ ಮಾಡಿದ್ದಾರೆ.
ಒಂದು ವರ್ಷದ ಹಿಂದೆ ಬಳ್ಳಾರಿ ರೈಲ್ವೆ ನಿಲ್ದಾಣದ ಬೋಗಿಯಲ್ಲಿ ನವಜಾತ ಶಿಶು ಸಿಕ್ಕಿತ್ತು. ನಂತರ ಮಗುವನ್ನು ರಕ್ಷಿಸಿ ಸರ್ಕಾರಿ ಶಿಶುಗೃಹದಲ್ಲಿ ಸೇರಿಸಲಾಗಿತ್ತು. ಅಲ್ಲದೇ ಮಗುವಿಗೆ ನಿಶ್ವಿತಾ ಎಂದು ನಾಮಕರಣ ಮಾಡಲಾಗಿತ್ತು. ಇಂದು ಆ ಮಗುವಿಗೆ ಒಂದು ವರ್ಷದ ಸಂಭ್ರಮ. ನಿಶ್ವಿತಾಳ ಹುಟ್ಟುಹಬ್ಬವನ್ನು ಸಿಬ್ಬಂದಿ ಸೇರಿಕೊಂಡು ಸಂಭ್ರಮದಿಂದ ಆಚರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದಪಾಶಾ ಸೇರಿದಂತೆ, ಸಂಸ್ಥೆಯ ಅಧೀಕ್ಷಕರು ಹಾಗೂ ಸಿಬ್ಬಂದಿ ಇದ್ದರು. ಕಳೆದ ಒಂದು ವರ್ಷದ ಹಿಂದೆ ನವಜಾತ ಶಿಶುವನ್ನು ಪಾಲಕರು ರೈಲ್ವೆ ಬೋಗಿಯಲ್ಲಿ ಬಿಟ್ಟು ಹೋಗಿದ್ದರು. ಆಗ ಇಲ್ಲಿನ ರೈಲ್ವೆ ಸಿಬ್ಬಂದಿ ಮಗುವನ್ನು ಬಳ್ಳಾರಿಯ ಸರ್ಕಾರಿ ಶಿಶುವಿಹಾರಕ್ಕೆ ಒಪ್ಪಿಸಿದ್ದರು.

ಆಗಿನಿಂದ ಮಗು ಸರ್ಕಾರಿ ಶಿಶು ವಿಹಾರದಲ್ಲಿ ಬೆಳೆಯುತ್ತಿದ್ದು, ಸದ್ಯ ಮಗುವಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.
 Laxmi News 24×7
Laxmi News 24×7
				 
		 
						
					 
						
					 
						
					