ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭಾರೀ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಇದೀಗ ಕಳೆದವರ್ಷವಷ್ಟೇ ಕಟ್ಟಿದ ಮನೆ ಸಹ ಬೀಳುವ ಹಂತ ತುಲುಪಿದ್ದು, ಅಡಿಪಾಯ ಕೊಚ್ಚಿ ಹೋಗಿದೆ.ಜಿಲ್ಲೆಯ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ಮನೆಯ ಅಡಿಪಾಯ ಕುಸಿದು ಬೀಳುವ ಹಂತ ತಲುಪಿದೆ. ನಾಗಮ್ಮ ಅವರಿಗೆ ಸೇರಿದ ಮನೆ ಇದಾಗಿದ್ದು, ಮೂಡಿಗೆರೆಯಲ್ಲಿ ಮಳೆ-ಗಾಳಿ ಅಬ್ಬರದ ಹಿನ್ನೆಲೆ ಮಣ್ಣು ಹೆಚ್ಚು ಕುಸಿಯುತ್ತಿದೆ. ಹೀಗಾಗಿ ಅಡಿಪಾಯ ಸಹ ಕೊಚ್ಚಿ ಹೋಗಿದೆ. ಕಳೆದ ವರ್ಷ ಕಟ್ಟಿದ ಮನೆ, ಇದೀಗ ಬೀಳುವ ಆತಂಕ ಎದುರಾಗಿದೆ. ಮನೆಯ ಸುತ್ತಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಮನೆ ಗೃಹ ಪ್ರವೇಶವಾಗಿ ವರ್ಷವೂ ಕಳೆದಿಲ್ಲ. ಸಾಲ ಮಾಡಿ ಕಟ್ಟಿದ ಮನೆ ಸ್ಥಿತಿ ಕಂಡು ನಾಗಮ್ಮ ಕಂಗಾಲಾಗಿದ್ದಾರೆ. ಮನೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ. ಇದರಿಂದಾಗಿ ನಾಗಮ್ಮರ ಅಕ್ಕಪಕ್ಕದ ಮನೆಯವರಲ್ಲೂ ಆತಂಕ ಮನೆ ಮಾಡಿದೆ.