ಕಲಬುರಗಿ : ನದಿಗೆ ಈಜುಲು ಹೋಗಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾದ ಘಟನೆ ಕಲಬುರಗಿ ಜಿಲ್ಲೆಯ ಕಾಗಿಣಾ ನದಿಯಲ್ಲಿ ನಡೆದಿದೆ.
ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ಸಂಪತ್ ಸಂಕ(18) ಮೃತ ಯುವಕ.
ಶಾಲೆ, ಕಾಲೇಜ್ ರಜೆ ಇರುವ ಹಿನ್ನೆಲೆಯಲ್ಲಿ ಪ್ರತಿದಿನ ಸ್ನೇಹಿತರೊಂದಿಗೆ ಕಾಗಿಣಾ ನದಿಗೆ ಈಜುಲು ಹೋಗುತ್ತಿದ್ದರು. ಅದೇ ರೀತಿ ಗುರುವಾರವೂ ಸಹ ಹೋಗಿದ್ದಾರೆ. ಈಜು ಬರುತ್ತಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರಿಗೆ ಧುಮುಕ್ಕಿದ್ದ ಯುವಕ, ದುರದೃಷ್ಟವಶಾತ್ ಸುಳಿಗೆ ಸಿಲುಕಿ ಹೊರಬರಲಾಗದೆ ಸಾವನ್ನಪ್ಪಿದ್ದಾನೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಈಜು ಬರುತ್ತಿದ್ದರು ನೀರಿನ ರಭಸದಲ್ಲಿ ಸುಳಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ವಾಡಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮೀನುಗಾರರ ಸಹಾಯದಿಂದ ಶವ ಹುಡುಕುವ ಕೆಲಸ ಮಾಡಿದ್ದಾರೆ. ಹಲವು ಗಂಟೆಗಳ ಹುಡುಕಾಟದ ನಂತರ ಮೀನುಗಾರರು ಯುವಕನ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
Laxmi News 24×7