ಹಾಸನ: ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕವನ್ನು ಪವರ್ ಮ್ಯಾನ್ ಸರಿಪಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಗ್ರಾಮಸ್ಥರಿಗೆ ಸಹಾಯವಾಗಲಿ ಎಂದು ಪವರ್ ಮ್ಯಾನ್ ಅಮಿತ್ ಎದೆಮಟ್ಟದವರೆಗೆ ನಿಂತಿದ್ದ ನೀರಿನಲ್ಲೇ ಸುಮಾರು 500 ಮೀಟರ್ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಕಳೆದ 3 ದಿನದಿಂದ ಸತತವಾಗಿ ಮಳೆ ಆರ್ಭಟ ಜೋರಾಗಿದ್ದು, ರಾಮನಾಥಪುರ ವ್ಯಾಪ್ತಿಯ ತೋಟವೊಂದರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಇದರಿಂದಾಗಿ ಗ್ರಾಮಸ್ಥರಿಗೆ ವಿದ್ಯುತ್ ಸಮಸ್ಯೆ ತಲೆದೋರಿದ್ದು ಪವರ್ ಮ್ಯಾನ್ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ರಾಮನಾಥಪುರ ಹೋಬಳಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತ ದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಅಮಿತ್ ಅವರು ಸುತ್ತಲೂ ಎದೆವರೆಗೂ ನೀರು ನಿಂತಿದ್ದ ತೋಟದಲ್ಲಿ ಸುಮಾರು 500 ಮೀಟರ್ ದೂರದವರೆಗೂ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Laxmi News 24×7