Breaking News

ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು

Spread the love

ಗೋಕಾಕ್:  ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ  ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಇಂದು ಮಾಹಿತಿ ನೀಡಿರುವ ಅವರು , ಮೂಡಲಗಿ ಸಿಡಿಪಿಓ ಸೇರಿ ಎರಡು ತಾಲ್ಲೂಕಿನಲ್ಲಿ 65 ಜನರಿಗೆ ಕೊರೊನಾ ದೃಢಪಟ್ಟಿದೆ. ಗೋಕಾಕಿನ ಸಂಗಮ ನಗರದ 65 ವರ್ಷದ ವೃದ್ದೆ ಸೋಂಕಿಗೆ ಬಲಿಯಾಗಿದ್ದಾರೆ.

ಗೋಕಾಕ ನಗರದಲ್ಲಿ-49 , ಕರಗುಪ್ಪಿ -1 , ಮೂಡಲಗಿ -2 , ನಲ್ಲಾನಟ್ಟಿ -1 , ನಾಗನೂರ -1 , ಘಟಪ್ರಭಾ -1 , ಕೊಣ್ಣೂರ -2 , ಕೌಜಲಗಿ -1, ಶಿಂಧಿಕೂರಬೇಟ -1, ಬೂದಿಹಾಳ -3, ಢವಳೇಶ್ವರ -2, ಅಂಕಲಗಿ 1  ಸೋಂಕು ದೃಠಪಟ್ಟಿದೆ.

ಸೋಂಕಿತ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದ್ದು,  ಸಮೀಪದ ಕೊರೊನಾ ಕೇರ್ ಸೆಂಟರ್ ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

8 ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ, ಸರ್ಕಾರಕ್ಕೆ ಸಂಜೆ 7 ಗಂಟೆಯ ಡೆಡ್‌ಲೈನ್‌

Spread the loveಬೆಳಗಾವಿ, ನವೆಂಬರ್ 6: ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ (Farmers Protest), ಹೋರಾಟದ ಕಾವು ದಿನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ