ಗೋಕಾಕ : ಬೆಳಗಾವಿ ಬಿಮ್ಸ್ ನಲ್ಲಿ 22/07/2020 ರಂದು ಆಂಬುಲೆನ್ಸ್ ಸುಟ್ಟಿರುವದು ಮತ್ತು ಆಸ್ಪತ್ರೆಗೆ ನುಗ್ಗಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡದಿದೆ. ಕೋವಿಡ್ 19 ನಿಯಂತ್ರಣಕ್ಕಾಗಿ ಹಗಲಿರುಳು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ದುಡಿಯುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಯವರ ರಕ್ಷಣೆ ಭರವಸೆ ನೀಡಬೇಕು.

ಇಂತಹ ಘಟನೆ ಗೋಕಾಕದಲ್ಲಿ ನಡೆಯದಂತೆ ರಕ್ಷಣೆ ನೀಡಬೇಕು ಎಂದು ಇಂದು ಗೋಕಾಕ ತಾಲೂಕಿನ ಕ.ರಾ.ಸ.ನೌ.ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲ ವಿವಿಧ ವ್ರುಂದ ಸಂಘಗಳ ವತಿಯಿಂದ ಮಾನ್ಯ ತಾಲೂಕಾ ಧಂಡಾಧಿಕಾರಿಗಳವರಿಗೆ ಮನವಿ ಸಲ್ಲಿಸಲಾಯಿತು.
Laxmi News 24×7