ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಪೊಲೀಸ್ ಪೇದೆಗಳಿಗೂ ಕೋವಿಡ್ ಕಾಟ ಆರಂಭವಾಗಿದೆ.
ಮಚ್ಛೆಯಲ್ಲಿರುವ ಕೆಎಸ್‌ಆರ್‌ಪಿ 2 ನೇ ಪಡೆಯ ಓರ್ವ ಮಹಿಳಾ ಪೇದೆ ಸೇರಿ 12 ಕೆಎಸ್‌ಆರ್‌ಪಿ ಸಿಬ್ಬಂದಿಗೆ ಸೋಂಕು ತಗುಲಿದೆ. ಸೋಂಕು ತಗುಲಿದ ಸಿಬ್ಬಂದಿ ಎಲ್ಲರೂ ಜಿಲ್ಲೆಯ ಗಡಿ ಭಾಗದ ಕಾಗವಾಡ ಮತ್ತು ಕಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿಭಾಯಿಸಿದ್ರು.
ಕೆಎಸ್ಆರ್ ಪಿ ಎರಡನೇ ಬೆಟಾಲಿಯನ್ ನಲ್ಲಿ 70 ಮಹಿಳಾ ಸಿಬ್ಬಂದಿ ಸೇರಿ 660 ಸಿಬ್ಬಂದಿ ಸೇವೆಯಲ್ಲಿದ್ದಾರೆ. ಈ ಪೈಕಿ 12 ಸಿಬ್ಬಂದಿಗಳಿಗೆ ಸೋಂಕು ತಗುಲಿತ್ತು. ಒಬ್ಬ ಪೇದೆ ಗುಣಾಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 11 ಜನರಿಗೆ ಚಿಕಿತ್ಸೆ ಮುಂದುವರಿದೆ ಅಂತಾ ಕೆಎಸ್‌ಆರ್‌ಪಿ ಕಮಾಂಡೆಂಟ್ ಹಮ್ಜಾ ಹುಸೇನ್ ಮಾಹಿತಿ ನೀಡಿದ್ದಾರೆ.
ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನ ಮೇಲಾಧಿಕಾರಿಗಳು ವಾಪಾಸ್ ಕರೆಯಿಸಿಕೊಂಡಿದ್ದಾರೆ.