ಬೆಳಗಾವಿ – ಕೊರೋನಾದಿಂದ ಬೆಳಗಾವಿ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 17ಕ್ಕೇರಿದೆ. ಇಂದು ಮೂವರು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ.
ಇಂದು ಬೆಳಗಾವಿ ನಗರದಲ್ಲಿ ಇಬ್ಬರು ಹಾಗೂ ಅಥಣಿಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ನಗರದ ಕುಮಾರಸ್ವಾಮಿ ಬಡಾವಣೆ ಮತ್ತು ಆನಗೋಳದಲ್ಲಿ ಒಬ್ಬೊಬ್ಬರು ಸಾವಿಗೀಡಾಗಿದ್ದಾರೆ.
ನಿನ್ನೆ 64 ಜನರಿಗೆ ಸೋಂಕು ಪತ್ತಯಾಗಿರುವುದು ಸೇರಿ ಜಿಲ್ಲೆಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 561ಕ್ಕೇರಿದೆ. 366 ಜನರು ಗುಣಮುಖರಾಗಿದ್ದು, ಇನ್ನೂ 185 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.