Breaking News

ರಾಜ್ಯದಲ್ಲಿ ಗುಂಡಾಗಿರಿ ಸರಕಾರ ಆಡಳಿತದಲ್ಲಿದೆ: ಗೋವಿಂದ ಕಾರಜೋಳ

Spread the love

ಬಾಗಲಕೋಟೆ: ಕಾಂಗ್ರೆಸ್ ನಲ್ಲಿ ಅಭಿವೃದ್ಧಿ ಕ್ರಾಂತಿಯಿಲ್ಲ ಕೇವಲ ಭ್ರಷ್ಟಾಚಾರದ ಜಾತ್ರೆ, ಅಧಿಕಾರಕ್ಕಾಗಿ ಕಿತ್ತಾಟ, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡದೆ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ ಎಂದು ಸರಕಾರದ ವಿರುದ್ಧ ಮಾಜಿ ಡಿಸಿಎಂ ಗೋವಿಂದ್ ಕಾರಜೋಳ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯಸರಕಾರದಲ್ಲಿ ಖುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಅಭಿವೃದ್ಧಿಯ ಚಿಂತನೆ ಇಲ್ಲದೇ ದುರಾಡಳಿತ ಮಿತಿಮೀರಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಶೋಷಣೆ, ಅತ್ಯಾಚಾರ ಮಿತಿಮೀರಿದೆ. ಸರಕಾರಿ ಮಹಿಳಾ ಅಧಿಕಾರಿಗಳ ಮೇಲೆ ನಿಂದನೆ ನಡೆಯುತ್ತಿದ್ದು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.

ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಕಾಳಜಿ ಇಲ್ಲ ಸಿದ್ದರಾಮಯ್ಯರವರಿಗೆ ರಾಹುಲ್ ಗಾಂಧಿ ಮತ್ತು ಡಿಕೆಶಿಗೆ ಸೋನಿಯಾಗಾಂಧಿ ಬೆನ್ನು ತಟ್ಟುತ್ತಿದ್ದಾರೆ. ಖುರ್ಚಿಗಾಗಿ ಮೂರು ಗುಂಪುಗಳ ಕಾದಟ ನಡೆದಿದೆ. ಕಾಂಗ್ರೆಸ್ ಸರಕಾರ ನೀರ ಮೇಲಿನ ಗುಳ್ಳೆಯಂತಾಗಿದೆ.
ಸೋನಿಯಾ, ರಾಹುಲ್ ಗಾಂಧಿ, ಅಖಿಲ್ ಭಾರತ ಕಂಗ್ರೆಸ್ ಪದಾಧಿಕಾರಿಗಳ ಮೂರು ಅಂಗಡಿಗಳು ಕಾಂಗ್ರೆಸ್ ಪಕ್ಷದಲ್ಲಿದ್ದು ಲಾಭವಷ್ಟೆ ಅವರ ವಿಚಾರವಾಗಿದೆ.
ಗೌರ್ನರಿಗೆ ಬೆಲೆ ಕೊಡದಿರುವ ಸರಕಾರ ಶಾಸನ ಆಧಾರಿತ ಆಡಳಿತ ಮಾಡದೇ ಗುಂಡಾಗಿರಿ ಆಡಳಿತ ನಡೆಸುತ್ತಿದೆ ಎಂದರು.

ಬಿಜೆಪಿಯಲ್ಲಿ ಎಲ್ಲರೂ ಒಕ್ಕಟ್ಟಾಗಿದ್ದೇವೆ ಈ ಚುನಾವಣೆಯಲ್ಲಿ ಗೆಲವು ನಮ್ಮದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

 


Spread the love

About Laxminews 24x7

Check Also

ಬಾಗಲಕೋಟೆಯಲ್ಲಿಯೂ ಧರ್ಮಸ್ಥಳದ ಅವಹೇಳನವನ್ನು ಖಂಡಿಸಿ ಭಕ್ತರು ಪ್ರತಿಭಟನೆಯನ್ನು ನಡೆಸಿ, ಅವಹೇಳನ ಮಾಡುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ, ಉಗ್ರ ಪ್ರತಿಭಟನೆಯ ಎಚ್ಚರಿಕೆ

Spread the love ಬಾಗಲಕೋಟೆಯಲ್ಲಿಯೂ ಧರ್ಮಸ್ಥಳದ ಅವಹೇಳನವನ್ನು ಖಂಡಿಸಿ ಭಕ್ತರು ಪ್ರತಿಭಟನೆಯನ್ನು ನಡೆಸಿ, ಅವಹೇಳನ ಮಾಡುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ, ಉಗ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ