ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ನಿರಂತರ ಹಿಮಪಾತವಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಹಿಮಪಾತ ಹೆಚ್ಚಾಗಿದ್ದು, ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಹಿಮ ತೆರವು ಕಾರ್ಯ ನಡೆಯುತ್ತಿದೆ.
ಏಪ್ರನ್ ಮತ್ತು ಟ್ಯಾಕ್ಸಿ ವೇ ಗಳಲ್ಲಿನ ಹಿಮ ತೆರವು ಮಾಡಿ ವಿಮಾನಗಳ ಹಾರಾಟಕ್ಕೆ ಪರೀಕ್ಷೆಗಳು ನಡೆಯುತ್ತಿವೆ. ಶೀಘ್ರದಲ್ಲೇ ವಾಣಿಜ್ಯ ಬಳಕೆಗೆ ವಿಮಾನ ನಿಲ್ದಾಣ ಮುಕ್ತವಾಗುವ ನಿರೀಕ್ಷೆಯಿದೆ.
ಹಿಮದಿಂದ ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಪ್ರವಾಸಿ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿ ಪರದಾಡುತ್ತಿದ್ದಾರೆ.
Laxmi News 24×7