Breaking News

ಬಸವ ಭೀಮ ಸೇನೆಯಿಂದ ಶನಿವಾರ ಗೌರವ…………

Spread the love

ಬೆಳಗಾವಿ: ಛಲವಾದಿ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ದುರ್ಗೇಶ್ ಮೇತ್ರಿ ಅವರ ಮಾತೋಶ್ರೀ ದಶಕಗಳ ಕಾಲ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಹೋರಾಡಿದ ಅವ್ವಕ್ಕ ಮೇತ್ರಿ ಅವರಿಗೆ ಬಸವ ಭೀಮ ಸೇನೆಯಿಂದ ಶನಿವಾರ ಗೌರವಿಸಿದರು.

 ಬಸವ ಭೀಮ ಸೇನೆಯಿಂದ ಜುಲೈ 26ರವರೆಗೆ ಬಸವ ಪಂಚಮಿ ಅಂಗವಾಗಿ   ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನ ಹಮ್ಮಿಕೊಂಡಿದ್ದೆವೆ.  ಶೋಷಿತ ಸಮುದಾಯಗಳಿಗೆ ಬಸವಣ್ಣನವರೇ ಸತ್ವ. ಅಂಬೇಡ್ಕರರೇ ಶಕ್ತಿ. ಸತ್ವ ಮತ್ತು ಶಕ್ತಿಗಳನ್ನು ಸಮೀಕರಿಸಿಕೊಂಡು ಬದುಕಿನ ಹಾಗೂ ಸಾಮಾಜಿಕ ಸಮಸ್ಯೆಗಳೊಂದಿಗೆ ಹೋರಾಡಬೇಕಾಗಿದೆ. ಮತ್ತೆ ಈ ನೆಲದಲ್ಲಿ ವೈಚಾರಿಕ ಚಿಂತನೆಗಳನ್ನು ಬಲಗೊಳಿಸಬೇಕಾಗಿದೆ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಹೇಳಿದರು.

ಸನ್ಮಾನ ಸ್ವೀಕರಿಸಿ ಆಶೀರ್ವದಿಸಿದ ಅವ್ವಕ್ಕ ಮೇತ್ರಿ ಅವರು, ನಾನು ನಡೆಸಿದ ಹೋರಾಟಗಳಿಗೆ ಸಂದ ಗೌರವ ಎಂದು ಭಾವಿಸಿದ್ದೇನೆ. ಛಲವಾದಿ ಸಮಾಜದ ಹಿರಿಯ ಪ್ರತಿನಿಧಿಯಾಗಿ ಈ ಗೌರವ ಸ್ವೀಕರಿಸಿದ್ದೇನೆ ಎಂದರು.

ದುರ್ಗೆಶ ಮೇತ್ರಿ, ಕಾವೇರಿ ಮೇತ್ರಿ, ಗೌರಿ ಮೇತ್ರಿ, ನವ್ಯ ಮೇತ್ರಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ