ಬೆಳಗಾವಿ- ಶಾಸಕಿ ಹೆಬ್ಬಾಳ್ಕರ್ – ಸಚಿವ ರಮೇಶ ಜಾರಕಿಹೊಳಿ ನಡುವೆ ನಡೆಯುತ್ತಿರುವ ಕುಕ್ಕರ್ ವಾರ್ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ,ಶಾಸಕ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕುಕ್ಕರ್ ಬಂದ್ ಮಾಡೋದು.. ಚಾಲು ಮಾಡೋದು.. ಎಲ್ಲಾ ನಿಮ್ಮ ಕಡೆನೇ ಇದೆ,ಇಬ್ಬರನ್ನೂ ಕರೆದುಕೊಂಡು ಹೋಗಿ ಹೋಗಿ ಆಣೆ ಮಾಡಿಸಿ,
ಸಂವಾದ ಮಾಡ್ಸಿ.. ಯಾರು ಸುಳ್ಳು ಹೇಳ್ತಾರೋ ನೋಡಬೇಕಲ್ಲ, ಎಲ್ಲಿ ಆಣೆ ಪ್ರಮಾಣ ಮಾಡಲು ಹೊಗ್ತಾರೆ ನೋಡಿ, ಕೊಲ್ಲಾಪುರಕ್ಕೆ ಹೋಗ್ತಾರೊ ಅಥವಾ ಎಲ್ಲಿ ಹೊಗ್ತಾರೋ ನೀವೆ ಕೇಳಿ ಎಂದ ಸತೀಶ್ ಜಾರಕಿಹೋಳಿ ಮಾದ್ಯಮದವರತ್ತ ಬೊಟ್ಟು ಮಾಡಿದರು.
ಅದು ಅವರಿಬ್ಬರ ನಡುವಿನ ವಿಚಾರ, ನಾನು ಆ ಬಗ್ಗೆ ಏನೂ ಹೇಳಲ್ಲ,ಎಂದು
ಸತೀಶ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಕರೋನ ನಿಯಂತ್ರಣ ಮಾಡುವಲ್ಲಿ ಸರ್ಕಾರ ಫೇಲ್ ಆಗಿದೆ,ಕೇಂದ್ರ ಮತ್ತು ರಾಜ್ಯದ ಸರ್ಕಾರ ಎರಡೂ ಸರ್ಕಾರ ಫೇಲ್ ಆಗಿವೆ, ಮೂರು ತಿಂಗಳಾದ್ರೂ ನಿಯಂತ್ರಣ ಮಾಡುವ ಪ್ಲಾನ್ ಆಗಿಲ್ಲ, ಕೇಂದ್ರ ಮತ್ತು ರಾಜ್ಯದ ಸರ್ಕಾರದ ನಡುವೆ
ಹೊಂದಾಣಿಕೆ ಇಲ್ಲಾ, ಕೋವಿಡ್ ನಿಯಂತ್ರಣ ಮಾಡುವಲ್ಲಿ ಭ್ರಷ್ಟಾಚಾರ ನಡೆದಿದ್ದು ಅದು ಈಗ ಹೊರಗಡೆ ಬಂದಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ಈ ಕುರಿತು ಸಿದ್ದರಾಮಯ್ಯ ಹೋರಾಟ ನಡೆಸಿದ್ದಾರೆ.
ನಮ್ಮ ಹೋರಾಟ ಇದ್ದೇ ಇರುತ್ತದೆ.
ಸ್ವತಹ ಬಿಜೆಪಿ ಶಾಸಕರೇ ಮಾತನಾಡುತ್ತಿದ್ದಾರೆ, ಕೋವಿಡ್ ನಿಯಂತ್ರಣ ಮಾಡಲು
ರಿಯಲ್ ಪ್ಲಾನ್ ಏನುಮಾಡಬೇಕು ಅನ್ನೊದು ಪ್ಲಾನ್ ಇಲ್ಲಾ, ಕೋವಿಡ್ ನಿಯಂತ್ರಣ ವಿಚಾರವಾಗಿ, ತಪ್ಪಿದ್ರೆ ನಮ್ಮ ಪಕ್ಷ ಎಚ್ಚರಿಗೆ ನೀಡುತ್ತೆ ಹೋರಾಟ ಮಾಡುತ್ತಲೇ ಬಂದಿದ್ದೇವೆ ಮಂದೆನೂ ಮಾಡ್ತಿವಿ, ಸರಿಯಾದ ನಿಯಂತ್ರಣ ಇಲ್ಲವಾಗಿದ್ದರಿಂದ, ಇದರಿಂದ ರಾಜ್ಯದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸತೀಶ್ ಸರ್ಕಾರದ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದರು.
ಸರ್ಕಾರದಲ್ಲಿ ಸಾಕಷ್ಟು ದುಡ್ಡು ಇದೆ. ಅದನ್ನ ಖರ್ಚು ಮಾಡಿದ್ರೆ ಸಾಕು. ಸರಕಾರದ ಬಳಿ
3 ರಿಂದ 4 ನೂರು ಕೋಟಿ ಹಣ ಇದೆ. ಅದನ್ನೇ ಬಳಸಿದ್ರೆ ಸಾಕು,ಸರ್ಕಾರ ಜನರ ಪರ ಕೆಲಸ ಮಾಡಬೇಕು ಕೋವಿಡ್ ನಿಯಂತ್ರಣ ಮಾಡಲು
ಸರ್ಕಾರ ಸಂಪೂರ್ಣವಾಗಿ ವಿಫಲ ಆಗಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು