ಬೆಳಗಾವಿಯ ಬಿರಿಯಾನಿ ಪ್ರಿಯರಿಗೆ ಸಿಹಿ ಸುದ್ಧಿ…
17ನೇ ಶಾಖೆ ಆರಂಭಿಸಿದ “ ಮಾವಳ್ಳಿ ಬಿರಿಯಾನಿ ”
ದಕ್ಷಿಣ ಕರ್ನಾಟಕದ ಸುಮಾರು 70 ಕ್ಕೂ ಅಧಿಕ ವರ್ಷದಿಂದ ಜನಪ್ರಿಯವಾದ ಬಿರಿಯಾನಿ ಈಗ ಬೆಳಗಾವಿಗರಿಗೆ ತನ್ನ ರುಚಿಯನ್ನು ಉಣಬಡಿಸಲು ಲಗ್ಗೆಯಿಟ್ಟಿದೆ. ರಾಜ್ಯದ್ಯಂತ ಈಗಾಗಲೇ 16 ಶಾಖೆಗಳನ್ನು ಹೊಂದಿದ ಮಾವಳ್ಳಿ ಬಿರಿಯಾನಿ ತನ್ನ 17ನೇ ಶಾಖೆಯನ್ನು ಬೆಳಗಾವಿಯಲ್ಲಿ ಆರಂಭಿಸಿದೆ.

ಹೌದು, ಬೆಳಗಾವಿಯ ಬಿರಿಯಾನಿ ಪ್ರಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ಧಿ. ಇಷ್ಟುದಿನ ವಿವಿಧೆಡೆಯ ಶೈಲಿಯ ಬಿರಿಯಾನಿಗಳನ್ನು ಸವಿದ ಬೆಳಗಾವಿಗರಿಗೆ ಈಗ ದಕ್ಷಿಣ ಕರ್ನಾಟಕದ ಸುಪ್ರಸಿದ್ಧ ಮಾವಳ್ಳಿ ಬಿರಿಯಾನಿ ತನ್ನ ರುಚಿಕರ ಬಿರಿಯಾನಿಯನ್ನು ಉಣಬಡಿಸಲು ಬೆಳಗಾವಿಗೆ ಲಗ್ಗೆ ಇಟ್ಟಿದೆ.
ಬೆಳಗಾವಿಯ ಕೊಲ್ಹಾಪುರ ವೃತ್ತದಲ್ಲಿ ಮಾವಳ್ಳಿ ಬಿರಿಯಾನಿಯ 17ನೇ ಶಾಖೆ ಆರಂಭಗೊಂಡಿದೆ. ಇಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಮತ್ತು ಬಿಗ್ ಬಾಸ್ ಖ್ಯಾತಿಯ ತನಿಷಾ ಅವರ ಮುಖ್ಯ ಉಪಸ್ಥಿತಿಯಲ್ಲಿ ಮಾವಳ್ಳಿ ಬಿರಿಯಾನಿಯ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ನಗರದಲ್ಲಿ ಪ್ರಖ್ಯಾತ ಮಾವಳ್ಳಿ ಬಿರಿಯಾನಿ ತನ್ನ ಹೊಸ ಶಾಖೆಯನ್ನು ಆರಂಭಿಸಿದ್ದು, ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಇನ್ನು ತನಿಷಾ ಅವರು ಮಾವಳ್ಳಿ ಬಿರಿಯಾನಿ ತನ್ನದೇಯಾದ ಮಸಾಲೆಯನ್ನು ಬಳಸಿ ಬಿರಿಯಾನಿಯನ್ನು ತಯಾರಿಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಖ್ಯಾತಿಯನ್ನ ಪಡೆದು ಜನಪ್ರಿಯವಾಗಿರುವ ಮಾವಳ್ಳಿ ಬಿರಿಯಾನಿ ಈಗ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ತನ್ನ 17ನೇ ಶಾಖೆಯನ್ನು ಆರಂಭಿಸಿದೆ. ಬೆಳಗಾವಿಗರು ಮಾವಳ್ಳಿ ಬಿರಿಯಾನಿಯನ್ನು ತಿಂದು ತೆಗ ಬೇಕೆಂದು ಕರೆ ನೀಡಿದರು.
ಮಾವಳ್ಳಿ ಬಿರಿಯಾನಿಯ ಸಂಸ್ಥಾಪಕ ಬಬ್ಲು ಗೌಡ್ರ ಮಾವಳ್ಳಿ ಬಿರಿಯಾನಿ ತನ್ನದೇಯಾದ ಟೆಸ್ಟ್’ನ್ನು ಹೊಂದಿದ್ದು, ಬೆಳಗಾವಿಗರ ಜನಮನ್ನಣೆಗೂ ಪಾತ್ರವಾಗಲಿದೆ. ಒಂದು ಬಾರಿ ಭೇಟಿ ನೀಡಿ ಮಾವಳ್ಳಿ ಬಿರಿಯಾನಿಯ ಸವಿಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿಯ ಮಾಲೀಕರಾದ ಪವನ್, ರವಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.