Breaking News

ಕರೆ ಮಾಡಲು ಕೊಟ್ಟ ಮೊಬೈಲ್ ವಾಪಸ್ ಕೇಳಿದ್ದಕ್ಕೆ ಮಾರಕಾಸ್ತ್ರದಿಂದ ಹಲ್ಲೆ

Spread the love

ಬೆಂಗಳೂರು: ಅಪರಿಚಿತರು ಮೊಬೈಲ್ ಫೋನ್ ಕೇಳಿದಾಗ ಕೊಡುವ ಮುನ್ನ ಸ್ವಲ್ಪ ಎಚ್ಚರವಿರಲಿ. ಕರೆ ಮಾಡಲು ಕೊಟ್ಟ ಫೋನ್​ನ್ನು ವಾಪಸ್ ಕೇಳಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜುಲೈ 3ರಂದು ಹಾಡಹಗಲೇ ಜಯನಗರದ ಪಟಾಲಮ್ಮ ದೇವಸ್ಥಾನದ ರಸ್ತೆಯಲ್ಲಿ ಈ ಘಟನೆ ಜರುಗಿದೆ. ದುಷ್ಕರ್ಮಿಯ ಅಟ್ಟಹಾಸಕ್ಕೆ ಸೆಕ್ಯುರಿಟಿ ಗಾರ್ಡ್ ಪರ್ವಿಂದರ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಅಸ್ಗರ್ ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತನ್ನ ಮೊಬೈಲ್ ಹಾಳಾಗಿದೆ ಎಂದ ಆರೋಪಿ: ಪಟ್ಟಾಕಮ್ಮ ದೇವಸ್ಥಾನದ ರಸ್ತೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಇಂಜಿನಿಯರಿಂಗ್ ಕೆಲಸವನ್ನು ಮಿಥುನ್ ಕುಮಾರ್ ಎಂಬವರು ಮಾಡುತ್ತಿದ್ದರು. ಜುಲೈ 3ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ರಸ್ತೆಯಲ್ಲಿ ಒನ್ ವೇನಲ್ಲಿ ಬಂದಿದ್ದ ಅಸ್ಗರ್, ‘ನನ್ನ ಮೊಬೈಲ್ ಹಾಳಾಗಿದೆ, ಒಂದು ಕರೆ ಮಾಡಬೇಕು’ ಎಂದು ಮಿಥುನ್ ಕುಮಾರ್ ಬಳಿ ಫೋನ್ ಕೇಳಿದ್ದ. ಈ ವೇಳೆ ಮಿಥುನ್ ಕುಮಾರ್ ತನ್ನ ಮೊಬೈಲ್ ಫೋನ್ ನೀಡಿದ್ದರು.

ಮೊಬೈಲ್​ ಮರಳಿ ಕೇಳಿದ್ದಕ್ಕೆ ಮಚ್ಚು ಬೀಸಿದ: ಎರಡು ಕರೆಗಳನ್ನು ಮಾಡಿದ್ದ ಆರೋಪಿ ಬಳಿ ಮಿಥುನ್ ಕುಮಾರ್ ಫೋನ್ ವಾಪಸ್ ಕೇಳಿದ್ದರು. ಮೊಬೈಲ್ ಹಿಂದಿರುಗಿಸಲು ನಿರಾಕರಿಸಿದ್ದ ಆರೋಪಿ, ತನ್ನ ಸ್ಕೂಟರ್‌ನ ಮ್ಯಾಟ್ ಅಡಿಯಿಂದ ಮಾರಕಾಸ್ತ್ರ ತೆಗೆದು ಮಿಥುನ್ ಕುಮಾರ್ ಮೇಲೆ ಬೀಸಿದ್ದ. ಈ ವೇಳೆ ಗಲಾಟೆ ಬಿಡಿಸಲು ಬಂದ ಸೆಕ್ಯೂರಿಟಿ ಗಾರ್ಡ್ ಪರ್ವಿಂದರ್ ಮೇಲೆಯೂ ಮಾರಕಾಸ್ತ್ರ ಬೀಸಿ ಸ್ಕೂಟರ್ ಹಿಂದಿರುಗಿಸಿಕೊಂಡು ಪರಾರಿಯಾಗಿದ್ದ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಠಾಣೆ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಸೆಕ್ಯೂರಿಟಿ ಗಾರ್ಡ್ ಪರ್ವಿಂದರ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ