ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್
ಜುಲೈ ಒಂದರಿಂದ ಆರಂಭಗೊಂಡಿರುವ ಗೋಕಾಕ್ ಗ್ರಾಮದೇವಿಯರ ಜಾತ್ರೆ ಗುರುವಾರವೂ ವಿಜ್ರಂಭಣೆಯಿಂದ ಮುಂದುವರೆದಿದ್ದು ಹೊನ್ನಾಟದಲ್ಲಿ ಭಕ್ತರು ಭಕ್ತಿ ಭಾವದಿಂದ ಮೈಮರೆತಿದ್ದರು ಇಂದು ಪುತ್ರ ರಾಹುಲ್ ಅವರೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ದೇವಿಯ ದರ್ಶನ ಪಡೆದರು
ಜುಲೈ 1ರಿಂದ ಆರಂಭಗೊಂಡಿರುವ ಗೋಕಾಕ್ ದೇವಿಯರ ಜಾತ್ರೆಯಲ್ಲಿ ಪೂಜೆ, ಅಭಿಷೇಕ, ನೈವೇದ್ಯ, ಪಾಲಿಕೆ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಮುಂದುವರೆದಿದ್ದು, ಇಂದು ದೇವಿಯರ ಉಭಯ ರಥಗಳು ಹಳೆಯ ಮುನ್ಸಿಪಲ್ ಕಚೇರಿ, ಚಾವಡಿ ರಸ್ತೆ, ಅಜಂತಾ ಕೂಟ ತಲುಪಲಿವೆ.ಮತ್ತೊಂದು ರಥವು ಬಾಫನಾ ಕೂಟ ತಲುಪಲಿದೆ.
ವಿವಿಧ ಓಣಿಗಳಲ್ಲಿ ದೇವಿಯ ಹೊನ್ನಾಟ ನಡೆದಿದೆ. ಇಂದು ಪುತ್ರ ರಾಹುಲ್ ಅವರೊಂದಿಗೆ ಸಚಿವ ಸತೀಶ ಜಾರಕಿಹೊಳಿಯವರು ಜಾತ್ರೆ ಹಾಗೂ ಹೊನ್ನಾಟದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದು ಪೂಜೆ ಪ್ರಾರ್ಥನೆ ಸಲ್ಲಿಸಿದರು. ಅವರೊಂದಿಗೆ ವಿವಿಧ ಗಣ್ಯರು ಆಗಮಿಸಿದ್ದರು.ಗೋಕಾಕ್ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಬೇರೆಬೇರೆ ಜಿಲ್ಲೆಗಳ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಹೊನ್ನಾಟದಲ್ಲಿ ಭಾಗಿಯಾಗುತ್ತಿರುವುದು ಸಾಮಾನ್ಯವಾಗಿದೆ.
ಜಾತ್ರೆ ನಿಮಿತ್ಯ ವಿವಿಧ ಕ್ರೀಡಾ ಶರ್ಯತ್ತುಗಳನ್ನು, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಮಕ್ಕಳ ಆಟಿಕೆಗಳು, ಬಳೆ ಅಂಗಡಿಗಳು ಸೇರಿದಂತೆ ವಿವಿಧ ಮಳಿಗೆಗಳು ಬೀಡು ಬಿಟ್ಟಿವೆ. ಗೋಕಾಕ ಪಟ್ಟಣವು ಜನರಿಂದ ಕಿಕ್ಕಿರಿದು ತುಂಬಿತುಳುಕುತ್ತಿದೆ
ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲಗಳಾಗದಂತೆ ಸುವ್ಯವಸ್ಥೆಯನ್ನು ಮಾಡಿವೆ.