Breaking News

ರಂಗಪಟ್ಟಣ ಶಾಸಕ ರಮೇಶ ಬಂಡಿ ಸಿದ್ದೇಗೌಡ ರಿಂದ ಮುಸ್ಲಿಮರಿಗೆ ಅವಮಾನ… ಎಸ್ ಡಿ ಪಿ ಐ ದಿಂದ ಪ್ರತಿಭಟನೆ….

Spread the love

ಬೆಳಗಾವಿ : ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿ ಸಿದ್ದೇಗೌಡ ರಿಂದ ಮುಸ್ಲಿಮರಿಗೆ ಅವಮಾನ…
ಎಸ್ ಡಿ ಪಿ ಐ ದಿಂದ ಪ್ರತಿಭಟನೆ….
ಸರಕಾರಿ ಜಮೀನನ್ನು ಮುಸ್ಲಿಮರ ಹೆಸರಿನಲ್ಲಿ ಪರಭಾರೆ ಮಾಡಿದರೆ, ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಧಮ್ಕಿ ಹಾಕಿರುವುದನ್ನು ಖಂಡಿಸಿ ಮಂಗಳವಾರ ಎಸ್ ಡಿಪಿಐ ಕಾರ್ಯಕರ್ತರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಜಮೀನಿನ ಮೇಲಿನ ಪರಭಾರೆ ವಿವಾದದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಹದೇವಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೂಡಲೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಯಾರಾದರೂ ಅದನ್ನು ಮುಸ್ಲಿಮರ ಹೆಸರಿನಲ್ಲಿ ಪರಭಾರೆ ಮಾಡಿದರೆ, ನೇಣಿಗೆ ಹಾಕುವುದು ಗ್ಯಾರಂಟಿ’ ಎಂದು ಬಹಿರಂಗ ಧಮ್ಕಿ ಹಾಕಿದ್ದಾರೆ ಅಂಥವರು ಶಾಸಕರಾಗಿ ಮುಂದುವರೆಯುವ ಅರ್ಹತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಯಿತು.

Spread the love

About Laxminews 24x7

Check Also

ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ನೆರವೇರಿಸಿದರು.

Spread the love ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ