Breaking News

ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಯಾವ ದಿನ, ಏನು ಆಹಾರ?

Spread the love

ಬೆಂಗಳೂರು: ಕೊರೊನಾ ಸೋಂಕಿತ ರೋಗಿಗಳಿಗೆ ಯಾವ ದಿನ, ಯಾವ ಆಹಾರ ನೀಡಬೇಕು ಎಂಬುದರ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಯ ಕೊರೊನಾ ಆಸ್ಪತ್ರೆಗಳಲ್ಲಿ ಮೆನು ಪ್ರಕಾರ ಆಹಾರ ನೀಡುವಂತೆ ಸೂಚಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ನೀಡಲಾಗುತ್ತಿಲ್ಲ. ಸೂಕ್ತ ಆಹಾರವಿಲ್ಲದೆ ಕೊರೊನಾ ರೋಗಿಗಳು ನರಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆ ಸರ್ಕಾರ ತಜ್ಞರ ಜೊತೆ ಚರ್ಚಿಸಿ ಪ್ರತಿ ದಿನ ಹಾಗೂ ಪ್ರತಿ ಹೊತ್ತಿನ ಊಟದ ಮೆನುವನ್ನು ಸಿದ್ಧಪಡಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಮೆನು ಪ್ರಕಾರ ರೋಗಿಗಳಿಗೆ ಊಟ, ಉಪಹಾರ ನೀಡಲು ತಿಳಿಸಿದೆ.

ಬೆಳಗಿನ ಉಪಹಾರ ಯಾವ ದಿನ ಏನು?
ಸೋಮವಾರ
ಬೆಳಗ್ಗೆ 7ಕ್ಕೆ ರವೆ ಇಡ್ಲಿ, ಬೆಳಗ್ಗೆ 10ಕ್ಕೆ ಕಲ್ಲಂಗಡಿ ಹಣ್ಣು, ರಾಗಿ ಗಂಜಿ

ಮಂಗಳವಾರ
ಬೆಳಗ್ಗೆ 7ಕ್ಕೆ ಪೊಂಗಲ್, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು, ಪಾಲಾಕ್ ಸೂಪ್.

ಬುಧವಾರ
ಬೆಳಗ್ಗೆ 7ಕ್ಕೆ ಸೆಟ್ ದೋಸೆ, ಬೆಳಗ್ಗೆ 10ಕ್ಕೆ ಕರಬೂಜ ಹಣ್ಣು, ರವೆ ಗಂಜಿ.

ಗುರುವಾರ
ಬೆಳಗ್ಗೆ 7ಕ್ಕೆ ಅಕ್ಕಿ ಇಡ್ಲಿ, ಬೆಳಗ್ಗೆ 10ಕ್ಕೆ ಕಲ್ಲಂಗಡಿ ಹಣ್ಣು, ಕ್ಯಾರೆಟ್ ಸೂಪ್.

ಶುಕ್ರವಾರ
ಬೆಳಗ್ಗೆ 7ಕ್ಕೆ ಬಿಸಿಬೇಳೆ ಬಾತ್, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು, ರಾಗಿ ಗಂಜಿ

ಶನಿವಾರ
ಬೆಳಗ್ಗೆ 7ಕ್ಕೆ ಚೌಚೌ ಬಾತ್, ಬೆಳಗ್ಗೆ 10ಕ್ಕೆ ಕರಬೂಜ ಹಣ್ಣು, ಟೊಮ್ಯಾಟೊ ಸೂಪ್

ಭಾನುವಾರ
ಬೆಳಗ್ಗೆ 7ಕ್ಕೆ ಸೆಟ್ ದೋಸೆ, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು, ರವೆ ಗಂಜಿ

ಊಟ ಏನೇನಿರುತ್ತೆ?
ಪ್ರತಿ ದಿನ ಬೆಳಗ್ಗೆ 7ಕ್ಕೆ ಉಪಹಾರ, ಬೆಳಗ್ಗೆ 10ಕ್ಕೆ ಹಣ್ಣು, ಗಂಜಿ ಅಥವಾ ಸೂಪ್, ಮಧ್ಯಾಹ್ನ 1ಕ್ಕೆ ಊಟ ರೊಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು, ಮೊಟ್ಟೆ ನೀಡಲಾಗುತ್ತದೆ. ಸಂಜೆ 5.30ಕ್ಕೆ ಲಘು ಉಪಹಾರ ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕೆಟ್-3, ಪ್ರೊಟೀನ್ ಬಿಸ್ಕೆಟ್-2, ಫ್ರೆಶ್ ಡೇಟ್ಸ್-2, ಮ್ಯಾಂಗೋ ಬಾರ್(ವಿಟಮಿನ್-ಸಿ ಯುಕ್ತ) ನೀಡಲಾಗುತ್ತದೆ. ರಾತ್ರಿ 7ಕ್ಕೆ ಊಟ ರೊಟ್ಟಿ ಅಥವಾ ಚಪಾತಿ-2, ಪಲ್ಯ, ಅನ್ನ, ಬೇಳೆ ಸಾರು, ಮೊಸರು ಹಾಗೂ ರಾತ್ರಿ 9ಕ್ಕೆ ಫ್ಲೇವರ್ಡ್ ಹಾಲು ನೀಡಲಾಗುತ್ತದೆ.

ದಿನವೂ ಮೊಟ್ಟೆ, ಫ್ಲೇವರ್ಡ್ ಮಿಲ್ಕ್ ಕಡ್ಡಾಯ ಕಡ್ಡಾಯವಾಗಿದೆ. ಪ್ರತಿ ದಿನ ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಆಹಾರ ಒದಗಿಸಬೇಕು. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ ನೀಡಬೇಕು. ಪ್ರತಿ ವ್ಯಕ್ತಿಗೆ ಆಹಾರದ ವೆಚ್ಚಕ್ಕಾಗಿ 250 ರೂ.ಮೀರದಂತೆ ಕ್ರಮ ವಹಿಸಬೇಕು. ಈ ಮೊತ್ತವನ್ನು ಎಆರ್‍ಎಸ್ ನಿಧಿಯಿಂದ, ಜಿಲ್ಲಾಧಿಕಾರಿಗಳ ಅಧೀನದ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ