ಬೇಸಿಗೆ ಹಿನ್ನೆಲೆ ಅಧಿಕಾರಿಗಳ ಹಿತದಲ್ಲಿ ಕಾರ್ಯಾಲಯದ ಸಮಯ ಬದಲಾಯಿಸಿದ ಸರ್ಕಾರ
ಗಂಟೆ 9 ಆದರೂ ಕಾರ್ಯಾಲಯ ಖಾಲಿ ಖಾಲಿ… ಜನರಿಂದ ಹಿಡಿಶಾಪ
ಬಿಸಿಲಿನ ತಾಪಮಾನದ ಹಿನ್ನೆಲೆ ಸಿಬ್ಬಂದಿಗಳಿಗೆ ತೊಂದರೆಯಾಗಬಾರದೆಂದು ರಾಜ್ಯ ಸರಕಾರ ಸಮಯ ಬದಲಾವಣೆ ಮಾಡಿದರೂ ಬಾಗಲಕೋಟ ಜಿಲ್ಲೆಯ ಮುಧೋಳ್ ತಾಲೂಕಿನಲ್ಲಿ ಸಿಬ್ಬಂದಿಗಳು ಕಾರ್ಯಾಲಯಕ್ಕೆ ಬಾರದ ಹಿನ್ನೆಲೆ ಜನರಿಗೆ ತೊಂದರೆ ಅನುಭವಿಸುವಂಥಾಗಿದೆ.

ಪ್ರಕಾರ ಬಿಸಿಲಿನ ಹಿನ್ನೆಲೆ ಏಪ್ರಿಲ್ ಮೇ ತಿಂಗಳಿನಲ್ಲಿ ಬೆಳಿಗ್ಗೆ 8:00 ಯಿಂದ ಮಧ್ಯಾಹ್ನ 1-30 ರ ವರೆಗೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಬೇಕೆಂದು ರಾಜ್ಯ ಸರ್ಕಾರ ಆದೇಶವನ್ನು ನೀಡಿದೆ. ಆದರೆ ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕಿನ ಸಣ್ಣ ನೀರಾವರಿ ಇಲಾಖೆ ಕಾರ್ಯಾಲಯದಲ್ಲಿ ಜವಾನನನ್ನು ಬಿಟ್ಟರೆ ಬೇರೆ ಯಾವ ಅಧಿಕಾರಿಗಳು ಗಂಟೆ 9 ಆದರೂ ಬಾರದ ಹಿನ್ನೆಲೆ ಕಾರ್ಯಾಲಯ ಖಾಲಿ ಖಾಲಿ ಆಗಿದೆ.

ಇದರಿಂದಾಗಿ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ತೊಂದರೆ ಉಂಟಾಗುತ್ತಿದೆ. ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ