Breaking News

ರಾಷ್ಟ್ರೀಯ ಹೆದ್ದಾರಿಗಳ ಟೋಲ್​ ದರ ರಾಜ್ಯದಲ್ಲಿ ಏಪ್ರಿಲ್​ 1ರಿಂದ ಹೆಚ್ಚಲಿದೆ.

Spread the love

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಏಪ್ರಿಲ್​ 1ರಿಂದ ಸಾಗುವ ಪ್ರಯಾಣಿಕರಿಗೆ ಟೋಲ್​ ದರದ ಬಿಸಿ ಮುಟ್ಟಲಿದೆ. ಏಪ್ರಿಲ್​ 1ರಿಂದ ಪರಿಷ್ಕೃತ ಟೋಲ್​ ದರ ಜಾರಿ ಮಾಡುವ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ ಮಾಡಿದ್ದು, ಏಕಮುಖ ಸಂಚಾರದ ದರ ಕಾರಿಗೆ 115ರಿಂದ 120 ರೂ ಆಗಲಿದೆ. ದ್ವಿಮುಖ ಸಂಚಾರ ದರ 170ರಿಂದ 180 ಆಗಲಿದೆ.

ಹಣದುಬ್ಬರದ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ನಡೆಸುವ ದರ ಹೆಚ್ಚಳದ ಅನುಸಾರವಾಗಿ ಈ ದರ ನಿಗದಿಯಾಗಿದ್ದು, ಕರ್ನಾಟಕದ ಟೋಲ್​ ಮಾತ್ರವಲ್ಲದೇ, ದೇಶದ ಎಲ್ಲಾ ಎನ್​ಎಚ್​ಎಐ ಟೋಲ್​ಗಳಲ್ಲೂ ದರ ಏರಿಕೆಯಾಗಲಿದೆ.

ಎನ್​ಎಚ್​ಎಐ ಪ್ರಾಜೆಕ್ಟ್​​ ನಿರ್ದೇಶಕ ಕೆ.ಬಿ.ಜಯಕುಮಾರ್​ ಮಾತನಾಡಿ, “ಈ ದರ ನಿಗದಿತ ಟೋಲ್​ ಪ್ಲಾಜಾ ಮತ್ತು ರಿಯಾಯಿತಿ ಅವಧಿ ಆಧಾರದ ಮೇಲೆ ಶೇ 3ರಿಂದ ಶೇ 5ರಷ್ಟು ಏರಿಕೆ ಕಾಣಲಿದೆ. ಮುಂದಿನ ದಿನದಲ್ಲಿ ಈ ಪರಿಷ್ಕೃತ ದರ ಏರಿಕೆಯನ್ನು ಪ್ರಕಟಿಸಲಾಗುವುದು” ಎಂದಿದ್ದಾರೆ.

ಪ್ರಯಾಣಿಕರು ಮತ್ತು ವಾಹನಗಳ ಮೇಲೆ ಪರಿಣಾಮ: ಬಳ್ಳಾರಿ ಟೋಲ್​ ದರ ಹೆಚ್ಚಳವು ಖಾಸಗಿ ವಾಹನ ಮಾಲೀಕರು, ವಿಮಾನ ಪ್ರಯಾಣ ನಡೆಸುವ ಟ್ಯಾಕ್ಸಿ ಹಾಗೂ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ಸಿಟಿ ಬಸ್​ ಮತ್ತು ಎಸಿ ಬಸ್​ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಈ ಟೋಲ್​ನಲ್ಲಿ ದಿನವೊಂದಕ್ಕೆ ಸರಾಸರಿ 80 ಸಾವಿರದಿಂದ 1 ಲಕ್ಷ ವಾಹನಗಳು ಪ್ರಯಾಣಿಸುತ್ತಿದ್ದು, ಬೆಂಗಳೂರಿನ ಬ್ಯುಸಿ ರಸ್ತೆ ಮಾರ್ಗಗಳಲ್ಲಿ ಇದು ಒಂದಾಗಿದೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ