ವಿಧಾನ ಮಂಡಲದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ…
ರಾಜ್ಯ ಸರ್ಕಾರವು ತನ್ನ ಬಜೆಟ್’ನಲ್ಲಿ ಹಲವಾರು ಮಹತ್ವದ ಕ್ಷೇತ್ರಗಳನ್ನು ಕಡೆಗಣಿಸಿ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಯೋಜನೆಗಳನ್ನು ಜಾರಿ ಮಾಡಿದೆ. ಆದ್ದರಿಂದ ಮಹತ್ವದ ಕ್ಷೇತ್ರಗಳಿಗೆ ಅನುದಾನವನ್ನು ನೀಡಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ನವಲಗುಂದ ಶಾಸಕ ಎನ್.ಎಚ್ ಕೊನರೆಡ್ಡಿ ಹೇಳಿದರು.
ಇಂದು ವಿಧಾನ ಮಂಡಲದ ಅಧಿವೇಶನದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರು ಸರ್ಕಾರ ತನ್ನ ಬಜೆಟಿನಲ್ಲಿ ರೈತರು, ಯುವಕರು, ಮಹಿಳೆಯರು, ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡದೇ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಮಾಡಿದೆ. ವಿಶೇಷಚೇತನ ಮಕ್ಕಳಿಗೆ ಪ್ಯಾರಾ ಓಲಂಪಿಕ್’ನಲ್ಲಿ ಭಾಗವಹಿಸಲು ವಿಶೇಷ ಪ್ರೋತ್ಸಾಹ ನೀಡಿ ಅವರನ್ನು ಮುಖ್ಯವಾಹಿನಿಗೆ ತರಬೇಕು. ಕಂದಾಯ ಇಲಾಖೆಯಲ್ಲಿನ ಡಾಟಾ ಎಂಟ್ರಿ ಆಪ್’ರೇಟರ್’ಗಳ ಸೇವೆಯನ್ನು ಖಾಯಂಗೊಳಿಸಿ, ಶೀಘ್ರದಲ್ಲೇ ಗೌರವಧನ ನೀಡಬೇಕು. ಮಹಿಳೆಯರ ಆರ್ಥಿಕ ಸಬಲತೆಗೆ ಒತ್ತು ನೀಡಬೇಕೆಂದರು
.
ಇನ್ನು ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಅವರು ರೈತರ ಪಶುಗಳ ನಿಧನಕ್ಕೆ ಪರಿಹಾರ ಧನ ಹೆಚ್ಚಿಸಬೇಕು. 50 ನೂತನ ಪಶು ಚಿಕಿತ್ಸಾಲಯಗಳನ್ನು ನಿರ್ಮಿಸಬೇಕು. ರಾಜ್ಯದ ಜವಾರಿ ಆಕಳು, ಎಮ್ಮೆಗಳ ಸಂಗೋಪನೆಗೆ ಮುಂದಾಗಬೇಕು. ರೈತರ ಏಳ್ಗೆಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬೇಕೆಂದರು.