ಬೆಳಗಾವಿ ಜಿಲ್ಲಾಡಳಿತದಿಂದ ಸರ್ವಜ್ಞ ಜಯಂತಿ ಆಚರಣೆ
ಬೆಳಗಾವಿಯಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಆಚರಣೆ
ಜಿಲ್ಲಾಡಳಿತ, ಜಿ.ಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆಯಿಂದ ಕಾರ್ಯಕ್ರಮ
ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಗಣ್ಯರು
ಸರ್ವಜ್ಞರ ತ್ರಿಪದಿಗಳು ತ್ರಿಕಾಲ ಸತ್ಯ-ಡಾ.ಗುರುದೇವಿ ಹುಲೆಪ್ಪನವರ ಮಠ
ಗುರುವಾರ ಬೆಳಗಾವಿಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತ್ರಿಪದಿ ಕವಿ ಸರ್ವಜ್ಞರ ಜಯಂತಿಯನ್ನು ಆಚರಿಸಲಾಯಿತು
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕವಿ ಸರ್ವಜ್ಞರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರ ಮಠ ಅವರು, ಸರ್ವಜ್ಞ ಕವಿ ತಮ್ಮ ತೀಕ್ಷ್ಣ ತ್ರಿಪದಿಗಳ ಮೂಲಕ ಮನುಷ್ಯನ ಎಲ್ಲಾ ಮುಖಗಳನ್ನು ಅನಾವರಣ ಗೊಳಿಸಿ ತ್ರಿಕಾಲ ಸತ್ಯ ಹೇಳುವ ಮೂಲಕ ಬದುಕಿನ ಮೌಲ್ಯಗಳು ಮತ್ತು ಸತ್ಯ ಮಿಥ್ಯದ ಅನುಭಾವ ಸಾರವನ್ನು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗಣ್ಯರಾದ ಸುರೇಶ ವೈದ್ಯ, ನಿಂಗಪ್ಪ ಕುಂಬಾರ,ಐ.ಎಸ್. ಕುಂಬಾರ,ಸಿ.ವಿ.ಯಡೂರ, ಅಣ್ಣಪ್ಪ ಕುಂಬಾರ, ಮೋಹನ ಬೇವಿನಗಿಡದ, ಸುಶೀಲಾ ಕುಂಬಾರ ಇನ್ನಿತರರು ಉಪಸ್ಥಿತರಿದ್ದರು.