ಬಾಗಲಕೋಟ: ಈ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ಪಂಚಗ್ಯಾರೇಂಟಿ ಭರವಸೆ ನೀಡಿ ಅಧಿಕಾರ ಗದ್ದು ಏರಿದೆ.ಇದೀಗ ಗ್ಯಾರೆಂಟಿ ಯೋಜನೆ ಜಾರಿಯಲ್ಲಿವೆ.ಆದ್ರೆ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾದಂತೆ ಕಾಣ್ತಿದೆ. ಅದನ್ನ ಸರಿದೂಗಿಸಲು ಹಿಂದಿನ ಬಿಜೆಪಿ ಸರ್ಕಾರ ಮುಂಜೂರು ಮಾಡಿದ 9 ವಿವಿಗಳನ್ನ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ ಕಾಂಗ್ರೆಸ್ ಸರ್ಕಾರ. ಸರ್ಕಾರದ ನಡೆ ವಿರುದ್ಧ ಇದೀಗ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟಕ್ಕೆ ಧೂಮಿಕಿದ್ದಾರೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಒಂದೆಡೆ ಸರ್ಕಾರದ ವಿರುದ್ಧ ದಿಕ್ಕಾರ ಕೂಗ್ತಿರೋ ವಿದ್ಯಾರ್ಥಿಗಳು. ಮತ್ತೊಂದೆಡೆ ಸರ್ಕಾರದ ನಿರ್ಧಾರ ಖಂಡಿಸಿ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿರೋ ಎಬಿವಿಪಿ ವಿದ್ಯಾರ್ಥಿ ಪರಿಷತ್.ಇಂತಹ ವಿದ್ಯಾರ್ಥಿಗಳ ಪ್ರತಿಭಟನಾ ಆಕ್ರೋಶಕ್ಕೆ ಸಾಕ್ಷಿಯಾಗಿದ್ದು ಜಮಖಂಡಿ ನಗರ.ಹೌದು ಜಮಖಂಡಿ ನಗರದ ದೇಸಾಯಿ ಸರ್ಕಲ್ ನಲ್ಲಿ ಎಬಿವಿಪಿ ಹಾಗೂ ಎಸ್ ಎನ್ ಐ ವಿದ್ಯಾರ್ಥಿ ಕೂಟ ಸರ್ಕಾರ ಕೈಗೊಂಡ 9 ವಿವಿಗಳ ರದ್ದು ನಿರ್ಧಾರ ವಿರೋಧಿಸಿ ಪ್ರತಿಭಟನೆ ನಡೆಸಿದ್ರು.
ಸರ್ಕಾರ ಕೈಗೊಂಡ ನಿರ್ಧಾರದ ವ್ಯಾಪ್ತಿಗೆ ಬಾಗಲಕೋಟೆ ವಿವಿ ಕೂಡಾ ಸೇರಿದ್ದು ವಿವಿಯ ಸುಮಾರು 75 ಕಾಲೇಜು ಸೇರಿ ಅಂದಾಜು 35 ಸಾವಿರ ವಿದ್ಯಾರ್ಥಿಗಳಿಗೆ ಸರ್ಕಾರ ಅನ್ಯಾಯ ಮಾಡ್ತಿದೆ.ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ರೆ ವಿದ್ಯ ಪರಿಷತ್ ನಿಂದ ಮನೆ ಮನೆ ಹಣ ಸಂಗ್ರಹಿಸಿ ಕೊಡ್ತೆವೆ.ಆದ್ರೆ ವಿವಿ ರದ್ದು ನಿರ್ದಾರ ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದ್ರು.
ಇನ್ನು ಸರ್ಕಾರ ರಾಜ್ಯದ ಜನತೆಗೆ ನೀಡಿದ ಗ್ಯಾರೆಂಟಿ ಯೋಜನೆ ಹೊರೆಯಾಗಿದ್ದು.ಇದೀಗ ಸರ್ಕಾರ ಆರ್ಥಿಕ ಸಂಕಷ್ಟದಿಂದ ಪಾರಾಗಲು ಈ ನಿರ್ಧಾರ ಕೈಗೊಳ್ತಿದೆ.ಸರ್ಕಾರ ರಾಜ್ಯವನ್ನ ದಿವಾಳಿಗೆ ತಂದು ನಿಲ್ಲಿಸಿದೆ.ರಾಜ್ಯದ ಸುಭಿಕ್ಷೆಗೆ ಶೈಕ್ಷಣಿಕ ರಂಗದ ಪಾತ್ರ ಅತ್ಯಮುಲ್ಯ.ಉನ್ನತ ಶಿಕ್ಷಣಗಳ ವಿವಿಗಳನ್ನೇ ಸರ್ಕಾರ ರದ್ದು ಮಾಡ್ತಿರೋದು ಖೇದಕರ ಸಂಗತಿ.ಸರ್ಕಾರ ಸಮಿತಿಯಲ್ಲಿ ಕೈಗೊಂಡ 9 ವಿವಿಗಳ ರದ್ದು ನಿರ್ದಾರ ತಕ್ಷಣವೇ ಕೈ ಬಿಡಬೇಕು.ಪೂರಕವಾಗಿ ವಿವಿಗಳ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು ಎಂದು ವಿದ್ಯಾರ್ಥಿನಿ ಸೌಂದರ್ಯ ಆಗ್ರಹಿಸಿದ್ಲು.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಒಂದರ ಮೇಲೊಂದು ಪ್ರಮಾದಗಳನ್ನ ಮಾಡ್ತಾ ಸಾಗ್ತಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ತಾತ್ಸರವಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗ್ತಿದೆ.ಮೊನ್ನೆ ತೋಟಗಾರಿಕೆ ವಿವಿ ಆಯ್ತು.ಇದೀಗ ರಾಜ್ಯದ 9 ವಿವಿಗಳ ರದ್ದಿಗೆ ಮುಂದಾಗಿದ್ದು ಮಾರಿ ಸದ್ದು ಮಾಡ್ತಿರೋದಂತೂ ಸತ್ಯ