Breaking News

ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ

Spread the love

ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಇಂದು ಬೆಳಗಾವಿಯ ಸುವರ್ಣ ಸೌಧದ ಎದುರುಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಕಂಪ್ಲಿ ಶಾಸಕರು ಪ್ರತಿಭಟನಾಕಾರರ ಮನವಿಯನ್ನ ಸ್ವೀಕರಿಸಿದರು

. ಪ್ರತಿಭಟನೆ ನೇತೃತ್ವ ವಹಿಸಿದ್ದ ಸ್ವಾಮೀಜಿಗಳು ಮಾತನಾಡಿ ಹಡಪದ ಸಮಾಜದ ಅಭಿವೃದ್ಧಿಗಾಗಿ ವಿಶೇಷ ನಿಗಮವನ್ನು ಸ್ಥಾಪಿಸಬೇಕು. ಪ್ರವರ್ಗ ಮೂರು ಬಿ ದಲ್ಲಿರುವ ಸಮಾಜವನ್ನು ಪ್ರವರ್ಗ ಎರಡರಲ್ಲಿ ಸೇರಿಸಿ ತಾರತಮ್ಯವನ್ನು ನೀಗಿಸಬೇಕು.

ವಿದ್ಯಾರ್ಥಿಗಳ ಜಾತಿ ಪ್ರಮಾಣಪತ್ರದಲ್ಲಿ ತಪ್ಪಾಗಿ ನಮೂದಾದ ಪದವನ್ನು ಪರಿಷ್ಕರಿಸಲು ಅವಕಾಶ ನೀಡಬೇಕು. ನಿಷೇಧಿತ ಹಜಾಮ ಪದವನ್ನು ಬಳಕೆ ಮಾಡಿದರೆ ಅಟ್ರಾಸಿಟಿ ಪ್ರಕರಣ ದಾಖಲು ಮಾಡಬೇಕು.

ಹಡಪದ ಅಪ್ಪಣ್ಣನವರ ಜನ್ಮಸ್ಥಳವಾಗಿರುವ ಮಸಬಿನಾಳ ಮತ್ತು ಶಿವಶರಣೆ ಲಿಂಗಮ್ಮನವರ ಜನ್ಮಸ್ಥಳವಾಗಿರುವ ಬೇಗಿನಾಳ ಗ್ರಾಮದ ಅಭಿವೃದ್ಧಿಯನ್ನು ಪಡಿಸಲು ಕೂಡಲಸಂಗಮ ಪ್ರಾಧಿಕಾರದಲ್ಲಿ ಸೇರಿಸಬೇಕು. ಅದರಂತೆ ಅಪ್ಪಣ್ಣನವರ ಗುಹೆಯನ್ನು ಅಭಿವೃದ್ಧಿಪಡಿಸಲು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕೆಂದು ಒತ್ತಾಯಿಸಲಾಯಿತು. 

ಈ ವೇಳೆ ಹಡಪದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.


Spread the love

About Laxminews 24x7

Check Also

ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ

Spread the love ಬೆಳಗಾವಿ: ರಾಜ್ಯ ಸರ್ಕಾರ ದೆಹಲಿ ವಿಶೇಷ ಪ್ರತಿನಿಧಿ, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ