ಡಿಸೆಂಬರ್ 12: ಈ ಹಿಂದೆ ಆಧಾರ್ ಕಾರ್ಡ್ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಪ್ರಿಂಟ್ ಆಗಿದ್ದರೆ, ಅಂತಹ ಮಹಿಳೆಯರಿಗೆ ಬಿಎಂಟಿಸಿ ಕಂಡಕ್ಟರ್ಗಳು ಶಕ್ತಿ ಯೋಜನೆಯ ಟಿಕೆಟ್ ನೀಡುತ್ತಿರಲಿಲ್ಲ.
ಇದರಿಂದ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಸಾಕಷ್ಟು ಜಗಳಗಳಾಗುತ್ತಿದ್ದವು. ಇದನ್ನು ತಪ್ಪಿಸಲು ಬಿಎಂಟಿಸಿ ಮುಂದಾಗಿದ್ದು, ಇನ್ಮುಂದೆ ಆಧಾರ್ ಕಾರ್ಡ್ನಲ್ಲಿ ಕರ್ನಾಟಕದ ವಿಳಾಸ ಇದ್ದರೆ ಸಾಕು,
ಶಕ್ತಿ ಯೋಜನೆ ಟಿಕೆಟ್ ನೀಡಬಹುದು ಸೂಚನೆ ನೀಡಿದೆ. ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದವರು, ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಆಧಾರ್ ಕಾರ್ಡ್ ಕನ್ನಡದಲ್ಲಿ ವಿಳಾಸ ಇಲ್ಲಾಂದರೂ ಪರವಾಗಿಲ್ಲ, ಕರ್ನಾಟಕದ ವಿಳಾಸವಿದ್ದರೆ ಸಾಕು ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ.
Laxmi News 24×7