ಸಮಯಕ್ಕೆ ಸರಿಯಾಗಿ ಬಸ್ ಓಡಿಸಿ: ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಆದೇಶ
ಗೋಕಾಕ -ಸಾವಳಗಿ ಬಸ್ ಸರಿಯಾದ ಸಮಯಕ್ಕೆ ಬಸ್ ಓಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿದರು
ಸಾವಳಗಿ ಬಸ್ ಘಟಕದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಸಾವಳಗಿ-ಗೋಕಾಕ ಸಾವಳಗಿ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಸಾವಳಗಿ ಮುತ್ನಾಳ ಖಾನಾಪುರ ನಂದಗಾಂವ ಗ್ರಾಮಗಳಿಂದ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಗೋಕಾಕ ನಗರಕ್ಕೆ, ಹೋಗಲು ಸಮಯಕ್ಕೆ ಬಸ್ ಬಾರದಿರುವುದರಿಂದ ತೊಂದರೆಯಾಗುತ್ತಿದೆ. ಈ ಕುರಿತು ಕಳೆದ ವಾರ ಅಧಿಕಾರಿಗಳ ಮನವಿ ಮಾಡಿದ್ದ ವಿದ್ಯಾರ್ಥಿಗಳು, ಅಧಿಕಾರಿಗಳ ನಿರ್ಲಕ್ಷಕ್ಕೆ ಮತ್ತೆ ಪ್ರತಿಭಟನೆ ನಡೆಸಿದರು.
‘ಅಧಿಕಾರಿಗಳ ಸಮಜಾಯಿಸಿ ಉತ್ತರದಿಂದ ನಾವೆಲ್ಲ ರೋಸಿ ಹೋಗಿದ್ದೇವೆ. ಹಿಂದೆ ಪ್ರತಿಭಟಿಸಿದಾಗ ನೀಡಿದ ಭರವಸೆ ನೀಡದರು. ಆದರೂ ಸರಿಯಾದ ಸಮಯಕ್ಕೆ ಬಸ್‌ಗಳು ಬಾರದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ಸಂಚಾರ ನಿಯಂತ್ರಕ ಘಟಕ ಅಧಿಕಾರಿಗಳು ಆಗಮಿಸಿ
ಸಾವಳಗಿ
ಜಗದ್ಗುರು ಶ್ರೀ ಕುಮಾರೇಂದ್ರ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿಯವರು ಹಾಗೂ
ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೆ ಸರಿಯಾದ ಸಮಯಕ್ಕೆ ಬಸ್ ಓಡಾಟ ನಡೆಸುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದರು. ಇದೆ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲಕರು ಗ್ರಾಮದ ಹಿರಿಯರು ಪ್ರಮುಖ ಮುಖಂಡರು ಹಾಜರಿದ್ದರು