ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯಾದವಾಡ ಘಟಕ ವತಿಯಿಂದ ಆಯೋಜಿಸಲಾಗಿದ್ದ ಯಾದವಾಡ ಸಾಂಸ್ಕೃತಿಕ ಉತ್ಸವ-೨೦೨೪ ರ ಕಾರ್ಯಕ್ರವನ್ನು ಉದ್ಘಾಟಿಸಿ, ಮಾತನಾಡಿದೆ.
ಎಲ್ಲ ಸಂಕಷ್ಟಗಳ ಮಧ್ಯೆಯೂ ಕಳೆದ ಹಲವು ವರ್ಷಗಳಿಂದ ಇಂತಹ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಖುಷಿಯ ವಿಚಾರ, ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವವರು ಎಲ್ಲೆಡೆ ಇರುತ್ತಾರೆ, ಆದರೆ ಅಂತವುಗಳಿಗೆ ಜಗ್ಗದೆ, ಬಗ್ಗದೆ ಕಲ್ಮೇಶ್ ಮತ್ತು ತಂಡ ಒಳ್ಳೆಯ ಮನಸ್ಸಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಇಂತಹ ಕಾರ್ಯಕ್ರಮಗಳು ಕೇವಲ ಮನರಂಜನೆಗಷ್ಟೆ ಸೀಮಿತವಾಗಿರುವುದಿಲ್ಲ, ನಮ್ಮ ಸಂಸ್ಕಾರವನ್ನು, ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಲು ಇವು ಸಹಕಾರಿಯಾಗುತ್ತವೆ.
ನಮ್ಮಲ್ಲಿ ಹೊಸ ಉತ್ಸಾಹ, ಚೈತನ್ಯವನ್ನು ತುಂಬುತ್ತವೆ, ಎಷ್ಟೋ ಕಲಾವಿದರನ್ನು ಬೆಳಕಿಗೆ ತರುತ್ತವೆ, ಎಷ್ಟೊ ಕಲಾವಿದರ ಜೀವನ ರೂಪಿಸುತ್ತವೆ. ಜೊತೆಗೆ, ಪಕ್ಷ ಭೇದ ಮರೆತು ಜನರನ್ನೆಲ್ಲ ಒಂದೆಡೆ ಸೇರಿಸುವ ಮೂಲಕ ಊರಿನ ಒಗ್ಗಟ್ಟಿಗೆ, ಬೆಳವಣಿಗೆಗೆ, ಅಭಿವೃದ್ಧಿಗೆ ಕಾರಣವಾಗುತ್ತವೆ.