Breaking News

ಪಾಸ್ ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಟೆಕ್ಕಿ ಯುವತಿ ಜೊತೆ ಅಸಭ್ಯ ವರ್ತನೆ.. ಬ್ಯಾಟರಾಯನಪುರ ಠಾಣೆಯ ಪೊಲೀಸ್ ಕಾನ್​ಸ್ಟೇಬಲ್ ಕಿರಣ್ ಸಸ್ಪೆಂಡ್..!

Spread the love

ಪಾಸ್ ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಟೆಕ್ಕಿ ಯುವತಿ ಜೊತೆ ಅಸಭ್ಯ ವರ್ತನೆ.. ಬ್ಯಾಟರಾಯನಪುರ ಠಾಣೆಯ ಪೊಲೀಸ್ ಕಾನ್​ಸ್ಟೇಬಲ್ ಕಿರಣ್ ಸಸ್ಪೆಂಡ್..!

ಪಾಸ್ ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಮಹಿಳಾ ಟೆಕ್ಕಿಯನ್ನ ತಬ್ಬಿಕೊಂಡ್ನಾ ಪೊಲೀಸಪ್ಪ? ಒಂದೇ ಒಂದು ಹಗ್ ಮಾಡು ಯಾರಿಗು ಹೇಳುವುದಿಲ್ಲ ಅಂತಾ ಟೆಕ್ಕಿಗೆ ಹಿಂಸೆ.. ಬ್ಯಾಟರಾಯನಪುರ ಠಾಣೆಯ ಪೊಲೀಸ್ ಕಾನ್​ಸ್ಟೇಬಲ್ ಅಮಾನತು..!

ಬಾಪೂಜಿನಗರದ ಯುವತಿಯೊಬ್ಬಳು ಪಾಸ್ ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ಲು ಈ ವೇಳೆ ಪಾಸ್ ಪೋರ್ಟ್ ವೆರಿಫಿಕೇಷನ್ ಅಂತಾ ಎರಡು ಮೂರು ಬಾರಿ ಯುವತಿಯ ಮನೆಗೆ ಹೋಗಿ ಅಸಭ್ಯ ವರ್ತನೆ . ಮನೆಗೆ ಎಂಟ್ರಿ ಕೊಟ್ಟು ಅರ್ಧ ಬಾಗಿಲು ಮುಚ್ಚಿದ ಪೇದೆ ನೀನು ನನಗೆ ಸಹಕರಿಸಬೇಕು ನಿಮ್ಮಣ್ಣ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್ ಪೋರ್ಟ್ ಕ್ಯಾನ್ಸಲ್ ಮಾಡ್ತೀನಿ. ಡೋರ್ ಕ್ಲೋಸ್ ಮಾಡುವಂತೆ ಯುವತಿಗೆ ಪೊಲೀಸಪ್ಪ ಕಿರಣ್ ಆಗ್ರಹ ..

ಯುವತಿ ಒಪ್ಪದಿದ್ದಾಗ ತಾನೆ ಹೋಗಿ ಡೋರ್ ಕ್ಲೋಸ್ ಮಾಡಿರೊ ಕಾನ್ ಸ್ಟೇಬಲ್‌ ಕಿರಣ್. ಯಾರಿಗೂ ಹೇಳಬೇಡ ಒಂದೇ ಒಂದ್ ಸಲ ಹಗ್ ಮಾಡ್ತೀನಿ ಅಂತಾ ಕಿರುಕುಳ. ಆ ಬಳಿಕ ಯುವತಿಯ ಅಣ್ಣ ರೂಂ ನಲ್ಲಿರೋದನ್ನ ನೋಡಿದ್ದ ಪೇದೆ. ನೀನು ಒಳಗೆ ಇದ್ದೀಯ ಅಂತಾನೆ ನಾನೆ ಹಿಂಗೆ ಮಾತಾಡಿದ್ದು, ನಿನ್ ತಂಗಿ ನನ್ ತಂಗಿ ಇದ್ದಹಾಗೆ ಅಂದಿದ್ದ ಪೊಲೀಸಪ್ಪ. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಿದ್ದ ಟೆಕ್ಕಿ.. ತನಿಖೆ ನಡೆಸಿ ಪೇದೆ ಕಿರಣ್​​ನ ಸಸ್ಪೆಂಡ್ ಮಾಡಿರೊ ಡಿಸಿಪಿ ಗಿರೀಶ್..!


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ